ತೃತೀಯ ಲಿಂಗಿಗಳನ್ನು ಸೇನೆಯಿಂದ ನಿಷೇಧಿಸುವ ಆದೇಶ ವಾಪಸ್?

Update: 2021-01-25 18:54 GMT

ವಾಶಿಂಗ್ಟನ್, ಜ. 25: ತೃತೀಯ ಲಿಂಗಿಗಳು ಅಮೆರಿಕ ಸೇನೆಗೆ ಸೇರುವುದನ್ನು ನಿಷೇಧಿಸುವ ನಿಕಟಪೂರ್ವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಆದೇಶವನ್ನು ಹಾಲಿ ಅಧ್ಯಕ್ಷ ಜೋ ಬೈಡನ್ ಹಿಂದಕ್ಕೆ ಪಡೆಯಲಿದ್ದಾರೆ ಎಂದು ಬಲ್ಲ ಮೂಲವೊಂದು ತಿಳಿಸಿರುವುದಾಗಿ ‘ರಾಯ್ಟರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಬೈಡನ್ ಈ ನಿಷೇಧವನ್ನು ತಕ್ಷಣವೇ ತೆರವುಗೊಳಿಸುವ ಸಾಧ್ಯತೆಯಿದೆ ಎಂದು ಅದು ತಿಳಿಸಿದೆ.

 ತೃತೀಯ ಲಿಂಗಿಗಳು ಸೇನೆಗೆ ಸೇರಬಹುದು ಎಂಬ ಆದೇಶವನ್ನು ಟ್ರಂಪ್‌ರ ಪೂರ್ವಾಧಿಕಾರಿ ಬರಾಕ್ ಒಬಾಮ ಹೊರಡಿಸಿದ್ದರು. ಅದನ್ನು 2017ರ ಜುಲೈಯಲ್ಲಿ ರದ್ದುಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News