ಅಲ್ ಫುರ್ಖಾನ್ ವಿದ್ಯಾ ಸಂಸ್ಥೆಯಲ್ಲಿ 72ನೇ ಗಣರಾಜ್ಯೋತ್ಸವ ಆಚರಣೆ

Update: 2021-01-26 06:12 GMT

ಮೂಡಬಿದಿರೆ : ಅಲ್ ಫುರ್ಖಾನ್ ಇಸ್ಲಾಮೀ ವಿದ್ಯಾ ಸಂಸ್ಥೆಯಲ್ಲಿ 72ನೇ ಗಣರಾಜ್ಯೋತ್ಸವ ಆಚರಿಸಲಾಯಿತು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅಲ್ ಫುರ್ಖಾನ್ ಆಲಿಮಾ ಕಾಲೇಜ್ ಪ್ರಾಂಶುಪಾಲರಾದ ಶೇಖ್ ಅಬ್ದುಲ್ ಮುಸವ್ವಿರ್ ಉಮ್ರಿ ಮದನಿ, ದೇಶದ ಸಂವಿಧಾನವು ಅರಿಯುವಲ್ಲಿ ನಾಗರಿಕರು ವಿಫಲರಾದ ಕಾರಣ ಹಲವಾರು ಸಮಸ್ಯೆಗಳು ಎದುರಿಸುತ್ತಿದ್ದಾರೆ. ಆದುದರಿಂದ ವಿದ್ಯಾರ್ಥಿ ಮಟ್ಟದಲ್ಲೇ ಸಂವಿಧಾನವನ್ನು ಅರಿತು ಪೋಷಿಸಬೇಕೆಂದು ಕರೆಕೊಟ್ಟರು.

ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸಂಸ್ಥೆಯ ಟ್ರಸ್ಟಿಗಳಾದ ಮುಹಮ್ಮದ್ ಅಶ್ಪಾಕ್, ಆಡಳಿತಾಧಿಕಾರಿ ಮುಹಮ್ಮದ್ ಶಹಾಂ, ತಾಂತ್ರಿಕ ಆಡಳಿತಾಧಿಕಾರಿ ನೂರ್ ಮುಹಮ್ಮದ್, ಪ್ರಾಂಶುಪಾಲರಾದ ನಝ್ರಾನ, ಉಪ ಪ್ರಾಂಶುಪಾಲರುಗಳಾದ ಅನೀಸಾ ಹಾಗೂ ಅಲ್ತಾಫ್ ಉಪಸ್ಥಿತರಿದ್ದರು. ರೈದಾನ್ ಮುಹಮ್ಮದ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News