ಭಟ್ಕಳ: 72ನೇ ಗಣರಾಜೋತ್ಸವ ಸಮಾರಂಭ

Update: 2021-01-26 10:24 GMT

ಭಟ್ಕಳ: ಭಾರತ ಸಾರ್ವಭೌಮ ಗಣತಂತ್ರ ರಾಷ್ಟ್ರವಾಗಿದ್ದು ಇಲ್ಲಿ ಎಲ್ಲರೂ ಸಮಾನರು. ಧರ್ಮ, ಜಾತಿ, ಜನಾಂಗದ ತಾರತಮ್ಯಗಳಿಂದ ಹೊರಬಂದು ದೇಶದ ಹಿತ ಕಾಪಾಡುವಂತೆ  ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತ ಭರತ್ ಕರೆ ನೀಡಿದರು. 

ಅವರು ಮಂಗಳವಾರ ಇಲ್ಲಿನ ವೈಎಂಎಸ್‍ಎ ತಲೂಕು ಕ್ರೀಡಾಂಗಣದಲ್ಲಿ ನಡೆದ 72ನೇ ಸಾರ್ವಜನಿಕ ಗಣರಾಜೋತ್ಸವ ಸಮಾರಂಭದಲ್ಲಿ ಸಂದೇಶ ನೀಡುತ್ತ ಮಾತನಾಡಿದರು.

ದರ್ಮ, ಜನಾಂಗ, ಜಾತಿ ತಾರತಮ್ಯಗಳಿಂದ ಹೊರ ಬಂದು ಭಾರತದ ದೇಶದ ಸಾರ್ವಭೌಮತೆಯನ್ನು ಎತ್ತಿ ಹಿಡಿಯಬೇಕು, ದೇಶದ ನಾಗರೀಕರಿಗೆ ಮೂಲಭೂತ ಹಕ್ಕುಗಳನ್ನು ದೊರಕಿಸಿಕೊಟ್ಟ ಆ ಮಹನ್ ಚೇತನ ಬಾಬಸಾಹೇಬ ಅಂಬೇಡ್ಕರರ ಚಿಂತನೆಗಳನ್ನು ನಾವು ಅಳವಡಿಸಿಕೊಳ್ಳುತ್ತ ದೇಶದ ಹಿತವನ್ನು ಕಾಪಾಡೋಣ ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದರು.

ಕೋವಿಡ್ -19 ಮೊದಲ ಹಂತದಲ್ಲಿ ನಮಗೆ ಜಯ ಲಭಿಸಿದ್ದು ಅದರ ಎರಡನೇ ಹಂತ ಇನ್ನೂ ಬಾಕಿ ಇದೆ ಎಂದು ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತ ಭರತ್ ಎಸ್. ಹೇಳಿದರು.

ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ  ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಹಸಿಲ್ದಾರ್ ರವಿಚಂದ್ರ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿರು. ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ್ ಮೊಗೇರ್ ಧನ್ಯವಾದ ಅರ್ಪಿಸಿದರು. ಶಿಕ್ಷಕ ಶ್ರೀಧರ್ ಶೇಟ್ ಶಿರಾಲಿ ಕಾರ್ಯಕ್ರಮ ನಿರೂಪಿಸಿದರು.

ಭಟ್ಕಳ ಪುರಸಭಾ ಅಧ್ಯಕ್ಷ ಮುಹಮ್ಮದ್ ಪರ್ವೇಝ್ ಕಾಶಿಮಜಿ, ಜಾಲಿ ಪ.ಪಂ ಅಧ್ಯಕ್ಷ ಶಮೀಮ್ ಬಾನು, ಪುರಸಭಾ ಮುಖ್ಯಾಧಿಕಾರಿ ದೇವರಾಜು, ತಾ.ಪಂ. ಕಾರ್ಯನಿರ್ವಾಣಾಧಿಕಾರಿ ಚಿಕ್ಕನಮನೆ  ಮತ್ತಿತರರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಿ ಗೌರಸಲಾಯಿತು. ವಿವಿಧ ಶಾಲಾ ಕಾಲೇಜು ತಂಡಗಳು ಹಾಗೂ ಪೊಲೀಸ್, ಕರಾವಳಿ ಕಾವಲು ಪಡೆ, ಸೇವದಳದ ಶಿಕ್ಷಕರಿಂದ ನಡೆದ ಪಥಸಂಚಲನ ಆಕರ್ಷಕವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News