ಕನ್ನಡದ ಬಗ್ಗೆ ಸರಕಾರಕ್ಕೆ ಕಾಳಜಿಯೇ ಇಲ್ಲ: ಹರಿಕೃಷ್ಣ ಪುನರೂರು

Update: 2021-01-26 10:35 GMT

ಬ್ರಹ್ಮಾವರ, ಜ.26: ರಾಜ್ಯದಲ್ಲಿ ಕನ್ನಡದ ಸ್ಥಿತಿ ಹೀನಾಯವಾಗಿದೆ. ವರ್ಷಕ್ಕೆ 3000 ಕನ್ನಡ ಶಾಲೆಗಳು ಮುಚ್ಚುಗಡೆಯಾಗುತ್ತಿದ್ದು, ಮುಂದೆ ಎರಡು ವರ್ಷಗಳಲ್ಲಿ ಕನ್ನಡ ಶಾಲೆಗಳೇ ಇರುವುದಿಲ್ಲ. ಇದಕ್ಕೆ ಸರಕಾರ ಧೋರಣೆಯೇ ಕಾರಣ. ಕನ್ನಡದ ಬಗ್ಗೆ ಸರಕಾರಕ್ಕೆ ಯಾವುದೇ ಕಾಳಜಿ ಇಲ್ಲವಾಗಿದೆಂದು ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಹರಿೃಷ್ಣ ಪುನರೂರು ಆರೋಪಿಸಿದ್ದಾರೆ.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಾರಥ್ಯದಲ್ಲಿ ಉಸಿರು ಕೋಟ ಮತ್ತು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಮಂಗಳವಾರ ಬ್ರಹ್ಮಾವರ ತಾಲೂಕಿನ ಹಂಗಾರಕಟ್ಟೆ ಚೇತನ ಪ್ರೌಢಶಾಲೆಯ ಸರಸ್ವತಿ ಬಾಯಿ ರಾಜವಾಡೆ ವೇದಿಕೆಯಲ್ಲಿ ಹಮ್ಮಿಕೊಳ್ಳಲಾದ ಉಡುಪಿ ಜಿಲ್ಲಾ 14ನೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.

ಇಂದು ನಮ್ಮ ರಾಜಕಾರಣಿಗಳೇ ಆಂಗ್ಲ ಮಾಧ್ಯಮ ಶಾಲೆಗಳನ್ನು ನಡೆಸುತ್ತಿ ದ್ದಾರೆ. ಹಾಗಿರುವಾಗ ಕನ್ನಡವನ್ನು ಕೇಳುವವರು ಯಾರಿದ್ದಾರೆ. ಕನ್ನಡ ಶಾಲೆ ಗಳಲ್ಲಿ ಒಂದರಿಂದ ಏಳನೇ ತರಗತಿವರೆಗೆ ಒಂದೇ ಅಧ್ಯಾಪಕರು ಕೆಲಸ ಮಾಡು ತ್ತಿದ್ದಾರೆ. ಅವರೇ ಅಡುಗೆ ಮಾಡಬೇಕು, ಅವರೇ ಪಾಠ ಮಾಡಬೇಕಾದ ಸ್ಥಿತಿ ಕನ್ನಡ ಶಾಲೆಗಳಲ್ಲಿವೆ. ಕನ್ನಡ ಉಳಿಸುವ ಕೆಲಸವನ್ನು ಸಾಹಿತ್ಯ ಪರಿಷತ್‌ನಂತಹ ಸಂಘ ಸಂಸ್ಥೆಗಳೇ ಮಾಡಬೇಕು ಹೊರತು ಸರಕಾರದಿಂದ ಆಗುವುದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಧ್ವಜ ಹಸ್ತಾಂತರಿಸಿದ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ಬಿ.ಜನಾರ್ದನ ಭಟ್ ಮಾತನಾಡಿ, ಸತ್ಯ ದರ್ಶನ ಮತ್ತು ಅರಿವು ಮೂಡಿಸುವುದು ಸಾಹಿತ್ಯ ಮತ್ತು ಸಮ್ಮೇಳನದ ಗುರಿಯಾಗಿದೆ. ಸಮ್ಮೇಳನವು ಜನರ ನಡುವೆ ಓಡಾಡ ಬೇಕು. ಇಂದು ಕನ್ನಡ ಮಾಧ್ಯಮ ನಿರ್ಲಕ್ಷಕ್ಕೆ ಒಳಗಾಗುತ್ತಿವೆ. ಸಾಹಿತ್ಯ ಓದಿ ನಲ್ಲಿ ಒತ್ತಾಯದ ವ್ಯವಸ್ಥೆ ಎಂಬುದು ಇಲ್ಲ ಎಂದು ತಿಳಿಸಿದರು.

ಮಹಿಳಾ ಸಾಧಕಿ ಜಾನಕಿ ಹಂದೆ ಹಾಗೂ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿ ಪುರಸ್ಕೃತೆ ಜ್ಯೋತಿ ಕುಲಾಲ್ ಆವರ್ಸೆ ದೀಪ ಪ್ರಜ್ವಲನ ಮಾಡಿದರು. ಗಂಡು ಹೆಣ್ಣು ಒಂದಾಗಿ ಹೋದರೆ ಮಾತ್ರ ಪ್ರಗತಿ ಸಾಧ್ಯ. ಇಬ್ಬರು ಒಂದೇ ನಾಣ್ಯ ಎರಡು ಮುಖಗಳು. ಗಂಡು ಹೆಣ್ಣು ಎಂಬ ತಾರತಮ್ಯ ಸಲ್ಲು ಎಂದು ಜಾನಕಿ ಹಂದೆ ಹೇಳಿದರು.

ಸಮ್ಮೇಳನಾಧ್ಯಕ್ಷತೆಯನ್ನು ಹಿರಿಯ ಲೇಖಕಿ ವೈದೇಹಿ ವಹಿಸಿದ್ದರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿದರು. ಹಂಗಾರಕಟ್ಟೆ ಪ್ರೌಢಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಭರತ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಇಬ್ರಾಹಿಂ ಸಾಹೇಬ್, ಮಾಬುಕಳ ಬಿ.ಡಿ.ಶೆಟ್ಟಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಜಿ.ಬಿ.ಶೆಟ್ಟಿ ಅತಿಥಿಗಳಾಗಿದ್ದರು.

ವೇದಿಕೆಯಲಿ ಉಡುಪಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಓ.ಆರ್.ಪ್ರಕಾಶ್, ಸಾಹಿತಿ ಜ್ಯೋತಿ ಗುರುಪ್ರಸಾದ್, ಡಾ.ನಿಕೇತನ, ಅಶೋಕ್ ಕಾಮತ್ ಮೊದಲಾದವರು ಉಪಸ್ಥಿತರಿದ್ದರು. ಕಸಾಪ ಗೌರವ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಸ್ವಾಗತಿಸಿದರು. ಸಂಘ ಟನಾ ಕಾರ್ಯದರ್ಶಿ ಆರೂರು ತಿಮ್ಮಪ್ಪ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ದರು. ಹಂಗಾರ ಕಟ್ಟೆ ಶಾಲೆಯ ಮುಖ್ಯ ಶಿಕ್ಷಕ ಗಣೇಶ್ ಜಿ. ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News