ಉಡುಪಿ ಜಾಮಿಯ ಮಸೀದಿಯಲ್ಲಿ ಗಣರಾಜ್ಯೋತ್ಸವ
Update: 2021-01-26 16:09 IST
ಉಡುಪಿ, ಜ.26: ಉಡುಪಿ ಜಾಮಿಯ ಮಸೀದಿಯಲ್ಲಿ ಗಣರಾಜ್ಯೋ ತ್ಸವ ದಿನಾಚರಣೆಯ ಧ್ವಜಾರೋಹಣವನ್ನು ಮಸೀದಿಯ ಧರ್ಮಗುರು ಮೌಲಾನಾ ರಶೀದ್ ಅಹ್ಮದ್ ನದ್ವಿ ಉಮ್ರಿ ನೆರವೇರಿಸಿದರು.
ಮಸೀದಿ ಅಧ್ಯಕ್ಷ ಮುಹಮ್ಮದ್ ಅರ್ಶಾದ್, ಉಪಾಧ್ಯಕ್ಷ ಕರಮತ್ ಅಲಿ, ಮಾಜಿ ಅಧ್ಯಕ್ಷ ಸೈಯ್ಯದ್ ಯಾಸೀನ್, ಕಮಿಟಿ ಸದಸ್ಯರಾದ ಫಯಾಝ್, ಖಲೀದ್, ಮುನೀರ್, ತಬ್ರೇಜ್, ಇಫ್ತಿಕಾರ್, ವೌಲಾನ ಯುನೂಸ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ವಿ.ಎಸ್.ಉಮರ್ ಸ್ವಾಗತಿಸಿದರು. ಕೋಶಾಧಿಕಾರಿ ರಿಯಾಝ್ ಅಹ್ಮದ್ ವಂದಿಸಿದರು.