ಹೆಜಮಾಡಿ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ

Update: 2021-01-26 11:39 GMT

ಪಡುಬಿದ್ರಿ : ಅಂತಾರಾಷ್ಟ್ರೀಯ ಮಟ್ಟದಲ್ಲಿಯೇ ಶ್ರೇಷ್ಠ ಸಂವಿಧಾನ ರಚನೆ ಮಾಡಿ ದೇಶಕ್ಕೆ ಅರ್ಪಿಸಿದ ಡಾ. ಬಿ.ಅರ್ ಅಂಬೇಡ್ಕರ್  ದೇಶಕ್ಕೆ ಕೊಡುಗೆ ನೀಡಿದರು. ನ್ಯಾಯಾಂಗ, ಕಾರ್ಯಾಂಗ, ಜಾತ್ಯಾತೀತ ಹಾಗು ಸಮಾನತೆಯ ಅಡಿಯಲ್ಲಿ ಬದುಕು ಸಾಗಿಸುವ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದ್ದು ಎಂದು ಕಾಪು ತಾಲೂಕು ಕ್ರೀಡಾಂಗಣ ಅಧಿಕಾರಿ ಅಲ್ವಿನ್ ಅಂದ್ರಾದೆ ಹೇಳಿದರು.

ಅವರು  ಪಡುಬಿದ್ರಿ ರೋಟರಿ ಕ್ಲಬ್, ಇನ್ನರ್ ವೀಲ್ ಕ್ಲಬ್ ಮತ್ತು ಯುವ ಸಬಲೀಕರಣ ಹಾಗು ಕ್ರೀಡಾ ಇಲಾಖೆ ಕಾಪು ತಾಲೂಕು ಇದರ ಜಂಟಿ  ಸಹಯೋಗದಲ್ಲಿ ಹೆಜಮಾಡಿ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ದಿನಾಚರಣೆ  ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದರು.

ಡಾ. ಬಿ.ಅರ್ ಅಂಬೆಂಡ್ಕರ್ ಭಾವಚಿತ್ರಕ್ಕೆ  ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಈಶ್ವರ್ ಹಾಗು ಕ್ರೀಡಾಂಗಣ ಸಮಿತಿ ಸದಸ್ಯ ಪಾಂಡುರಂಗ ಕರ್ಕೇರ ಮಾರ್ಲಾಪಣೆ ಗ್ಯೆದರು.

ರೋಟರಿ ಅಧ್ಯಕ್ಷ ಕೇಶವ ಸಾಲ್ಯಾನ್ ಧ್ವಜಾರೋಹಣ ಗ್ಯೆದರು. ರೋಟರಿ ವಲಯ ಸಂಯೋಜಕ ರಮೀಝ್ ಹುಸೈನ್, ಪೂರ್ವಾಧ್ಯಕ್ಷ ರಿಯಾಝ್ ಮುದರಂಗಡಿ, ಇನ್ನರ್ ವೀಲ್ ಕ್ಲಬ್ ನಿಯೋಜಿತ ಅಧ್ಯಕ್ಷೆ ಅನಿತಾ ಬಿ.ಎಸ್, ಸದಸ್ಯರಾದ ಸುನಿತಾ ಭಕ್ತ ವತ್ಸಲ, ಧನಲಕ್ಷ್ಮಿ ಹೆಜಮಾಡಿ,  ಗಾಮ ಪಂ. ಸದಸ್ಯರಾದ ಸುನಂದಾ ಸಾಲ್ಯಾನ್ ಪಡುಬಿದ್ರಿ, ಮೋಹನ್ ಸುವರ್ಣ, ಸರೀನಾ ಅಲ್ಮೆಡಾ  ರೋಟರಿ ಸದಸ್ಯರಾದ ಗೀತಾ ಅರುಣ್, ಪುಷ್ಪಲತಾ, ಸ್ಯಯದ್ ಕನ್ನಂಗಾರ್,  ಪವನ್ ಸಾಲ್ಯಾನ್, ಸಂತೋಷ್ ಪಡುಬಿದ್ರಿ ಉಪಸ್ಥಿತರಿದ್ದರು.

ಸುಧಾಕರ್ ಕೆ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಮಹಮ್ಮದ್ ನಿಯಾಜ್ ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News