ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದಿಂದ ಗಣರಾಜ್ಯ ದಿನಾಚರಣೆ

Update: 2021-01-26 11:45 GMT

ಮಂಗಳೂರು : ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ವತಿಯಿಂದ ನಗರದ ಟಾಗೋರ್ ಪಾರ್ಕ್ ನಲ್ಲಿಂದು 72ನೆ ಗಣರಾಜ್ಯ ದಿನಾಚರಣೆಯನ್ನು ಬಿ. ಪ್ರಭಾಕರ ಶ್ರೀಯಾನ್ ಅಧ್ಯಕ್ಷ ತೆಯಲ್ಲಿ ಆಚರಿಸಲಾಯಿತು.

ಸಮಾರಂಭದ ಮುಖ್ಯ ಭಾಷಣಕಾರರಾಗಿ ಆಗಮಿಸಿದ ನ್ಯಾಯವಾದಿ ದಯಾನಾಥ್ ಕೋಟ್ಯಾನ್, ದೇಶದ ಸಂವಿಧಾನ ರಚನೆ, ಅಂಗೀಕಾರ, ಪ್ರಜಾಪ್ರಭುತ್ವ ಘೋಷಣೆಗೆ ಸಂಬಂಧಿಸಿದಂತೆ ಡಾ.ಬಿ.ಆರ್. ಅಂಬೇಡ್ಕರ್ ರವರ ಶ್ರದ್ಧೆ ಸಾಧನೆಗಳನ್ನು ವಿವರಿಸಿದವರು. ದೇಶದ ಸಂವಿಧಾನದ ಆಶಯಗಳನ್ನು ಜನಮಾನಸದಲ್ಲಿ ಬಿತ್ತಿ ಬೆಳೆಸಬೇಕಾದ ಅಗತ್ಯವಿದೆ ಎಂದರು.

ಮುಖ್ಯ ಅತಿಥಿಯಾಗಿ ನಗರ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ ರಾದ ಕೆ.ವಿ.ರಾಘವೇಂದ್ರ ಅವರು ಗಣರಾಜ್ಯ ದಿನದ ಶುಭಾಶಯ ಕೋರಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ರಾದ ಹಾಜಿ ಇಬ್ರಾಹಿಂ ಕೋಡಿಜಾಲ್ ಉಪಸ್ಥಿತ ರಿದ್ದರು. ಕಾರ್ಯದರ್ಶಿ ಡಾ.ಇಸ್ಮಾಯಿಲ್ ಎನ್ ಸ್ವಾಗತಿಸಿದರು. ಕಲ್ಲೂರು ನಾಗೇಶ್ ಕಾರ್ಯಕ್ರಮ ನಿರೂಪಿಸಿದರು. ಪ್ರೇಮ ಚಂದ್ ವಂದಿಸಿದರು. ಉಷಾ ಎಂ ಬಳಗ ದೇಶಭಕ್ತಿ ಗೀತೆ ಹಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News