'ಸ್ವಚ್ಛ ಮನ-ಮನೆ -ಮಾದರಿ ಗ್ರಾಮ ಅಭಿಯಾನ' : ಮನೆಯಂಗಳದಲ್ಲಿ ಗಣರಾಜ್ಯ ದಿನಾಚರಣೆ
ಮಂಗಳೂರು, ಜ. 26: ಬಾಳೆ ಪುಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಇಸ್ಮಾಯಿಲ್ ಕಣಂತೂರು ಅವರ ಮನೆಯಂಗಳದಲ್ಲಿ ಗಣರಾಜ್ಯ ದಿನಾಚರಣೆ ಸ್ಚಚ್ಛ ಮನ-ಮನೆ-ಮಾದರಿ ಗ್ರಾಮ ಅಭಿಯಾನದ ವಿಶೇಷ ಕಾರ್ಯಕ್ರಮ ಮುಡಿಪು ಜನಶಿಕ್ಷಣ ಟ್ರಸ್ಟ್ ನೇತ್ರತ್ವದಲ್ಲಿ ಬಾಳೆಪುಣಿ ಗ್ರಾಮ ಪಂಚಾಯ ತ್ ಹಾಗೂ ಮಾದರಿ ಗ್ರಾಮ ಅಭಿಯಾನದ ಕಾರ್ಯ ತಂಡ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗ ದೊಂದಿಗೆ ನಡೆಯಿತು.
ದೇಶದ 72 ಗಣರಾಜ್ಯ ದಿನದ ಅಂಗವಾಗಿ ಮತದಾರರ ಜಾಗೃತಿ, ಸಂವಿಧಾನದ ಆರಿವು ಕಾರ್ಯಕ್ರಮ, ಸ್ವಚ್ಛ ಪರಿಸರ, ಸಾಕ್ಷರತೆ, ಸೋಲಾರ್ ದೀಪ ಅಳವಡಿಕೆಯೊಂದಿಗೆ ಸುಸ್ಥಿರ ಅಭಿವೃದ್ಧಿಯ ಮಾದರಿ ಗ್ರಾಮ ಕಾರ್ಯಕ್ರಮ ಪ್ರತಿ ಮನೆಯಂಗಳದಿಂದಲೇ ಆರಂಭವಾಗಬೇಕು ಈ ನಿಟ್ಟಿನಲ್ಲಿ ತನ್ನ ಮನೆಯಲ್ಲಿ ಸಮರ್ಪಕವಾಗಿ ತಾಜ್ಯ ವಿಲೇವಾ ರಿ ಘಟಕ ತ್ಯಾಜ್ಯ ನೀರಿನ ಇಂಗು ಗುಂಡಿ, ಸೋಲಾರ್ ದೀಪ ಅಳವಡಿಸಿ ಕೊಂಡು ಪರಿಸರದಲ್ಲಿ ಸ್ವಚ್ಛತೆಯ ಜಾಗ್ರತಿ ಮೂಡಿ ಸುತ್ತಿರುವ ಇಸ್ಮಾಯಿಲ್ ಕಣಂತೂರು ಅವರ ಮನೆಯನ್ನು ಗಣರಾಜ್ಯ ದಿನದ ಜಾಗ್ರತಿ ಕಾರ್ಯಕ್ರಮಕ್ಕೆ ಆರಿಸಿಕೊಳ್ಳಲಾಯಿತು.
ಗ್ರಾಮದ ಜನರು ತಾವೆ ಜಾಗ್ರತರಾಗಿ ಮಾದರಿ ಗ್ರಾಮದ ಅಭಿಯಾನದಲ್ಲಿ ತೊಡಗಿಸಿಕೊಂಡಾಗ ಗ್ರಾಮದ ಸುಸ್ಥಿರ ಅಭಿವೃದ್ಧಿ ಸಾಧ್ಯ ಜೊತೆಗೆ ಪ್ರಜಾಪ್ರಭುತ್ವ ದ ಉಳಿವಿಗೆ ಜನರ ಸಕ್ರೀಯ ಪಾಲ್ಗೊಳ್ಳುವಿ ಕೆ,ಸಂವಿಧಾನದ ಬಗ್ಗೆ ಸರಿಯಾದ ತಿಳುವಳಿಕೆ ಅಗತ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಸ್ವಚ್ಛತಾ ರಾಯಬಾರಿ ಹಾಗೂ ಮಾಜಿ ಒಂಬುಡ್ಸ್ ಮನ್ ಶೀನಶೆಟ್ಟಿ ತಿಳಿಸಿದ್ದಾರೆ.
ತಾಲೂಕು ಪಂಚಾಯತ್ ಸದಸ್ಯರಾದ ಹೈದರ್ ಕೈರಂಗಳ, ಮಾತನಾಡುತ್ತಾ ಮಾದರಿ ಗ್ರಾಮದ ನಿರ್ಮಾಣದ ಕಾರ್ಯಕ್ರಮ ಮನೆಯಂಗ ದಿಂದ ಸಮರ್ಪಕವಾಗಿ ಅನುಷ್ಠಾನ ಗೊಂಡಾಗ ಇನ್ನಷ್ಟು ಪರಿಣಾಮಕಾರಿ. ಈ ನಿಟ್ಟಿನಲ್ಲಿ ಗಣರಾಜ್ಯ ದಿನದಂದು ಉತ್ತಮ ಸಂಕಲ್ಪ ಹೆಚ್ಚು ಮಹತ್ವ ಪೂರ್ಣ ಎಂದರು.
ಮಾದರಿ ಗ್ರಾಮದ ಕಾರ್ಯ ಕರ್ತರು ಹಾಗೂ ಲೆಕ್ಕ ಪರಿಶೋಧಕ ರಾದ ಪುಂಡರೀಕಾಕ್ಷ ಮಾತನಾಡುತ್ತಾ, ಗಣರಾಜ್ಯ ದಿನದಂದು ದೇಶದ ಶ್ರೇಷ್ಠ ಸಂವಿಧಾನದ ವನ್ನು ಆಶಯಗಳನ್ನು ನೆನಪಿಸಿಕೊಂಡು ದೇಶಕ್ಕೆ ನಾವು ಸಲ್ಲಿಸಬೇಕಾದ ಕರ್ತವ್ಯ ದ ಕಡೆ ಗಮನಹರಿಸಿ ನಮ್ಮನ್ನು ತೊಡಗಿಸಿ ಕೊಳ್ಳಬೇಕಾದರೆ ಮಾದರಿ ಗ್ರಾಮ ಅಭಿಯಾನದಂತಹ ಕಾರ್ಯ ಕ್ರಮದಲ್ಲಿ ನಮ್ಮನ್ನು ತೊಡಗಿಸಿ ಕೊಳ್ಳ ಬೇಕಾದ ಅಗತ್ಯ ವಿದೆ ಎಂದರು.
ಗ್ರಾಮದ ಬಾಳೆಪುಣಿ ಗ್ರಾಮ ಪಂಚಾಯ ತ್ ಸದಸ್ಯರಾದ ಸೆಮಿಮಾ, ಅಬ್ದುಲ್ ಖಾದರ್, ಷರೀಫ್ ನಡುಪದವು , ಜನಾರ್ದನ, ಶಶಿಧರ, ನಳಿನಾಕ್ಷಿ, ಬಾಪು ಘನತ್ಯಾಜ್ಯ ಪ ನ್ಮೂಲ ಯ ಘಟಕದ ಅಧ್ಯಕ್ಷ ಇಬ್ರಾಹೀಂ ತಪಸ್ಯ , ಸ್ಥಳೀಯ ಸ್ವಚ್ಚತಾ ಕಾರ್ಯ ತಂಡ ಹಾಗೂ ವಿವಿಧ ಸಂಘಟನೆಗಳ ಮುಖಂಡ ರಾದ ರಮೇಶ್ ಶೇಣವ, ಅಬೂಬಕ್ಕರ್, ವಿದ್ಯಾ,ರತ್ನಾಕರ ಆಚಾರ್ಯ, ಇಸ್ಮಾಯಿಲ್ ಕಣಂತೂರು, ಅಬ್ದುಲ್ ಖಾದರ್, ಲಿಲ್ಲಿ ಮೇರಿ ,ಮುಖ್ಯ ಶಿಕ್ಷಕಿ ವಿಜಯ ಲಕ್ಷ್ಮೀ , ವೃತ್ತಿ ಕೌಶಲ್ಯ ತರಬೇತಿ ಕೇಂದ್ರದ ಪ್ರಾಂಶುಪಾಲ ಶರತ್ ಪತ್ರಕರ್ತರಾ ದ ಎನ್ .ಟಿ. ಗುರವಪ್ಪ ಬಾಳೆಪುಣಿ, ಪುಷ್ಪರಾಜ್ ಬಿ.ಎನ್ ಮೊದಲಾದವರು ಉಪಸ್ಥಿತರಿ ದ್ದರು.
ಜನಶಿಕ್ಷಣ ಟ್ರಸ್ಟ್ ನ ನಿರ್ದೇಶಕ ಕ್ರಷ್ಣ ಮೂಲ್ಯ ವಂದಿಸಿದರು. ಸಮಾರಂಭದಲ್ಲಿ ಮಂಗಳೂರು ರಥಬೀದಿಯ ಪಿ.ಸತೀಶ್ ಪೈ, ದಯಾ ನಂದ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ತಂಡದಿಂದ ಸ್ವಚ್ಚತಾ ಗೀತೆ ಕಾರ್ಯಕ್ರಮ, ಬೀದಿ ನಾಟಕ ಪ್ರದರ್ಶನ ನಡೆಯಿತು.
ಇದೇ ಸಂದರ್ಭದಲ್ಲಿ ಇಸ್ಮಾಯಿಲ್ ಅವರ ಮನೆಯಂಗಳದ ಇಂಗು ಗುಂಡಿ, ಸೋಲಾರ್ ದೀಪ, ತ್ಯಾಜ್ಯ ವಿಲೇವಾರಿ ಘಟಕವನ್ನು ಅತಿಥಿಗಳು ವೀಕ್ಷಿಸಿ ದರು. ಬಾಳೆ ಪುಣಿ ಗ್ರಾಮದ ಸ್ವಚ್ಚತಾ ಕಾರ್ಯಕ್ರಮಗಳ ಬಗ್ಗೆ ಸಂವಾದ ಕಾರ್ಯಕ್ರಮ ನಡೆಯಿತು..