ದಕ್ಷಿಣ ಚೀನಾ ಸಮುದ್ರದಲ್ಲಿ ಯುದ್ಧಾಭ್ಯಾಸ: ಚೀನಾ ಘೋಷಣೆ

Update: 2021-01-26 17:55 GMT

ಬೀಜಿಂಗ್ (ಚೀನಾ), ಜ. 26: ಈ ವಾರ ದಕ್ಷಿಣ ಚೀನಾ ಸಮುದ್ರದಲ್ಲಿ ಸೇನಾ ಕಸರತ್ತುಗಳನ್ನು ನಡೆಸುವುದಾಗಿ ಚೀನಾ ಮಂಗಳವಾರ ಹೇಳಿದೆ. ಇತ್ತೀಚೆಗೆ ವಿವಾದಾಸ್ಪದ ದಕ್ಷಿಣ ಚೀನಾ ಸಮುದ್ರದಲ್ಲಿ ಅಮೆರಿಕದ ವಿಮಾನವಾಹಕ ಯುದ್ಧನೌಕೆ ನಡೆಸಿರುವ ಯಾನಕ್ಕೆ ಆಕ್ರೋಶ ವ್ಯಕ್ತಪಡಿಸಿದ ದಿನಗಳ ಬಳಿಕ ಚೀನಾ ಈ ನಿರ್ಧಾರ ತೆಗೆದುಕೊಂಡಿದೆ.

ಜನವರಿ 27ರಿಂದ 30ರವರೆಗೆ ನೈರುತ್ಯ ಚೀನಾದಲ್ಲಿರುವ ಲೈಝೂ ಪರ್ಯಾಯ ದ್ವೀಪದ ಪಶ್ಚಿಮಕ್ಕಿರುವ ಟೊಂಕಿನ್ ಕೊಲ್ಲಿಯ ಜಲಪ್ರದೇಶದ ಒಂದು ಭಾಗಕ್ಕೆ ಪ್ರವೇಶವನ್ನು ಚೀನಾದ ಸಮುದ್ರಯಾನ ಸುರಕ್ಷತಾ ಇಲಾಖೆ ನಿಷೇಧಿಸಿದೆ. ಆದರೆ, ಯುದ್ಧ ತಾಲೀಮು ಯಾವಾಗ ಮತ್ತು ಯಾವ ಪ್ರಮಾಣದಲ್ಲಿ ನಡೆಯುತ್ತದೆ ಎನ್ನುವುದನ್ನು ಅದು ತಿಳಿಸಿಲ್ಲ.

ಯುಎಸ್‌ಎಸ್ ತಿಯಾಡೋರ್ ರೂಸ್‌ವೆಲ್ಟ್ ಯುದ್ಧನೌಕೆಯ ನೇತೃತ್ವದಲ್ಲಿ ಅಮೆರಿಕದ ವಿಮಾನವಾಹಕ ಯುದ್ಧನೌಕಾ ಸಮೂಹವೊಂದು ಶನಿವಾರ ದಕ್ಷಿಣ ಚೀನಾ ಸಮುದ್ರವನ್ನು ಪ್ರವೇಶಿಸಿದೆ. ‘‘ಸಮುದ್ರ ಯಾನದ ಸ್ವಾತಂತ್ರ’’ವನ್ನು ಎತ್ತಿಹಿಡಿಯುವುದಕ್ಕಾಗಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಅಮೆರಿಕ ಸೇನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News