ಸಿಟಿ ಸೆಂಟರ್ ಮಾಲ್‌ನಲ್ಲಿ ಡೈನೊಸಾರ್ ಜಗತ್ತಿನ ಅನುಭವ!

Update: 2021-01-27 11:03 GMT

ಮಂಗಳೂರು, ಜ.27: ಕೊರೋನ ಲಾಕ್‌ಡೌನ್ ಬಳಿಕ ಆನ್‌ಲೈನ್ ತರಗತಿ, ಟಿವಿ ಪರದೆಯ ಚಟಕ್ಕೆ ಬಿದ್ದಿರುವ ಮಕ್ಕಳಿಗೆ ಮನರಂಜನೆ ಒದಗಿಸುವ ಭಾಗವಾಗಿ ಸಿಟಿ ಸೆಂಟರ್ ಮಾಲ್‌ನಲ್ಲಿ ಡೈನೊಸಾರ್ ಜಗತ್ತಿನ ಅನುಭವವನ್ನು ಆನಂದಿಸುವ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಮಾಲ್‌ನ ಪ್ರವರ್ತಕರಾದ ಎಸ್.ಎಂ. ಅರ್ಶದ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ಚಳಿಗಾಲದ ಹಿತಾನುಭವದ ಜತೆಗೆ ಡೈನೊಸಾರ್ ಜಗತ್ತಿನ ವಿಸ್ಮಯವನ್ನು ‘ವಿಂಟರ್ ಡೈನೊಸಾರ್ಸ್ ವರ್ಲ್ಡ್ ಪ್ರಾಜೆಕ್್ಟ’ ಮೂಲಕ ತೆರೆಡಲಾಗಿದೆ ಎಂದರು.

ವಿಶ್ವದ ಅತ್ಯಂತ ಪ್ರಾಚೀನ ಹಾಗೂ ಅದ್ಭುತ ಜೀವಿಯಾಗಿದ್ದ ಬೃಹದಾಕಾರಾದ ಡೈನೋಸಾರ್‌ಗಳ ಪ್ರತಿಕೃತಿಗಳು ನೋಡುಗರನ್ನು ಆಕರ್ಷಿಸಲಿವೆ. ಈ ಡೈನೋಸಾರ್‌ಗಳ ಹಲ್ಲು, ಕಣ್ಣು, ಬಾಲ ಮತ್ತು ಕುತ್ತಿಗೆಯು ಚಲನೆಯ ಜತೆಗೆ ಶಬ್ಧವನ್ನೂ ಹೊಂದಿರುವ ಮೂಲಕ ನೈಜತೆಯ ಅನುಭವವನ್ನು ನೀಡಲಿದೆ. 18 ಅಡಿಗಳಿಂದ 4 ಅಡಿಗಳವರೆಗಿನ ಡೈನೋಸಾರ್‌ಗಳ ಪ್ರತಿಕೃತಿಗಳಿದ್ದು, ಬೃಹದಾಕಾರಾದ ಡೈನೋಸಾರ್ 18 ಅಡಿ ಮತ್ತು 15 ಅಡಿಯದ್ದಾಗಿರುತ್ತದೆ. ಡೈನೋಸಾರ್‌ನ ಈ ಪ್ರತಿಕೃತಿಗಳು ಮಕ್ಕಳು ಮಾತ್ರವಲ್ಲದೆ, ಎಲ್ಲಾ ವಯಸ್ಸಿನವರನ್ನೂ ಆಕರ್ಷಿಸುತ್ತವೆ.

ಈ ಡೈನೋಸಾರ್ ವರ್ಲ್ಡ್ ಎಕ್ಸ್‌ಪೆರಿಮೆಂಟಡಲ್ ಪ್ರಾಜೆಕ್ಟ್ ಅಬುದಾಬಿಯ ವಹದಾ ಮಾಲ್, ಭಾರತದ ನೊಯ್ಡ್ ದಿಲ್ಲಿಯ ಡಿಎಲ್‌ಎಫ್ ಮಾಲ್ ಹಾಗೂ ಮುಂಬೈ ಕುರ್ಲಾದ ಫಿಯೋನಿಕ್ಸ್ ಮಾಲ್‌ನಲ್ಲಿಯೂ ಪ್ರದರ್ಶಿಸಲ್ಪಡುತ್ತಿದೆ. ಇದೀಗ ಮಂಗಳೂರಿನ ಸಿಟಿ ಸೆಂಟರ್‌ನಲ್ಲಿಯೂ ಈ ವಿಶೇಷ ಅನುಭವವನ್ನು ಸಾರ್ವಜನಿಕರು ಪಡೆಯಬಹುದಾಗಿದೆ. ಮುಂದಿನ ಸುಮಾರು 4 ವಾರಗಳ ಕಾಲ ಈ ಡೈನೋಸಾರ್ ಜಗತ್ತಿನ ವಿಶಿಷ್ಠ ಅನುಭವವನ್ನು ಸಿಟಿ ಸೆಂಟರ್ ಮಾಲ್‌ನಲ್ಲಿ ಸಾರ್ವಜನಿಕರು ಪಡೆಯಬಹುದು ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಮಾಲ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ಎಸ್.ಎಂ. ಸವೂದ್, ಕ್ರೈಸಿಸ್ ಮ್ಯಾನೇಜರ್ ಹರೀಶ್ ಶೆಟ್ಟಿ, ಜನರಲ್ ವ್ಯೆಾನೇಜರ್ ಸೌಮ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News