ದಿಲ್ಲಿಯಲ್ಲಿ ದಾಖಲೆ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ಬೆಲೆ

Update: 2021-01-27 10:22 GMT

ಹೊಸದಿಲ್ಲಿ: ತೈಲ ಮಾರುಕಟ್ಟೆ ಕಂಪೆನಿಗಳು ಬುಧವಾರ 25 ಪೈಸೆ ಏರಿಕೆ ಮಾಡಿದ ಬಳಿಕ ದಿಲ್ಲಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ದಾಖಲೆ ಏರಿಕೆ ಕಂಡಿವೆ ಎಂದು ನ್ಯೂಸ್ 18 ವರದಿ ಮಾಡಿದೆ.

ರಾಷ್ಟ್ರ ರಾಜಧಾನಿಯಲ್ಲಿ ಸದ್ಯಕ್ಕೆ ಪೆಟ್ರೋಲ್ ದರ ಲೀಟರ್ ಗೆ 86.30 ರೂ., ಡೀಸೆಲ್ ಬೆಲೆ ಲೀಟರ್ ಗೆ 76.48 ರೂ. ಏರಿಕೆಯಾಗಿದೆ.

ಮುಂಬೈನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್‍ ಬೆಲೆಗಳು ಕ್ರಮವಾಗಿ 24 ಪೈಸೆ ಹಾಗೂ 27 ಪೈಸೆ ಏರಿಕೆಯಾಗಿದೆ. ಡೀಸೆಲ್ ಬೆಲೆ ಪ್ರತಿ ಲೀ.ಗೆ 83.30 ರೂ. ಹಾಗೂ ಪೆಟ್ರೋಲ್ ಬೆಲೆ 92.86 ರೂ.ಗೆ ಏರಿಕೆಯಾಗಿದೆ

ದಿಲ್ಲಿಯಲ್ಲಿ ಈ ತನಕ ಪೆಟ್ರೋಲ್ ದರ 2.59 ರೂ.ಹಾಗೂ ಡೀಸೆಲ್ ಬೆಲೆ ಲೀಟರ್ ಗೆ 2.61 ರೂ. ಏರಿಕೆಯಾಗಿದೆ ಎಂದು ಎನ್ ಡಿವಿ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News