ಗ್ರಾಮೀಣ ಪ್ರದೇಶದಲ್ಲಿ ಪಡಿತರ ಪಡೆಯಲು ಸರ್ವರ್ ಸಮಸ್ಯೆ: ಉಡುಪಿ ತಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆರೋಪ

Update: 2021-01-27 13:42 GMT

ಉಡುಪಿ, ಜ.27: ಗ್ರಾಮೀಣ ಪ್ರದೇಶಗಳಲ್ಲಿ ಸರ್ವರ್ ಸಮಸ್ಯೆಯಿಂದ ಫಲಾನುಭವಿಗಳು ಪಡಿತರ ಪಡೆಯಲು ತೊಂದರೆ ಅನುಭ ವಿಸುತ್ತಿದ್ದಾರೆ. ಆದುದರಿಂದ ಬೆರಳಚ್ಚು ವ್ಯವಸ್ಥೆಯನ್ನು ಬಿಟ್ಟು ಹಿಂದೆ ಇದ್ದ ವ್ಯವಸ್ಥೆಯಲ್ಲಿಯೇ ಪಡಿತರ ನೀಡಬೇಕು ಎಂದು ಉಡುಪಿ ತಾಪಂ ಸಾಮಾನ್ಯಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು.

ತಾಪಂ ಸಭಾಂಗಣದಲ್ಲಿ ಇಂದು ತಾಪಂ ಅಧ್ಯಕ್ಷೆ ಸಂಧ್ಯಾ ಕಾಮತ್ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಧನಂಜಯ ಕುಂದರ್, ಪಡಿತರ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆಯಿಂದ ಬೆರಳಚ್ಚು ನೀಡದೆ ಪಡಿತರ ಪಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಗ್ರಾಮೀಣ ಭಾಗದ ಜನರಿಗೆ ಪಡಿತರ ಪಡೆಯಲು ಕಷ್ಟವಾಗುತ್ತಿದೆ ಎಂದು ದೂರಿದರು. ಇವರೊಂದಿಗೆ ಇತರ ದಸ್ಯರು ಕೂಡ ಧ್ವನಿಗೂಡಿಸಿದರು.

ಈ ಬಗ್ಗೆ ಇಂಟರ್‌ನೆಟ್‌ನ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡು ವಂತೆ ಕಾರ್ಯನಿರ್ವಹಣಾಧಿಕಾರಿ ಮೋಹನ್‌ರಾಜ್, ಆಹಾರ ಮತ್ತು ನಾಗ ರಿಕ ಪೂರೈಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಹಿಂದಿನ ವ್ಯವಸ್ಥೆಯಲ್ಲಿ ಯೇ ಪಡಿತರ ನೀಡಬೇಕಾ ದರೆ ಸರಕಾರದ ಮಟ್ಟದಲ್ಲಿ ಕಾನೂನು ತಿದ್ದುಪಡಿ ಮಾಡಬೇಕು. ಅದಕ್ಕಾಗಿ ನಿರ್ಣಯ ಮಾಡಿ ಸರಕಾರಕ್ಕೆ ಕಳುಹಿಸಲಾಗುವುದು ಎಂದು ಮೋಹನ್‌ರಾಜ್ ತಿಳಿಸಿದರು.

ಕಜೆ ಅಕ್ಕಿಗೆ ಬೇಡಿಕೆ: ಉಡುಪಿ ಜಿಲ್ಲೆಯಲ್ಲಿ ಪಡಿತರ ಅಂಗಡಿಗಳಲ್ಲಿ ಬಿಳಿ ಅಕ್ಕಿಗೆ ಬದಲು ಕಜೆ ಅಕ್ಕಿ ನೀಡಲು ಕ್ರಮ ತೆಗೆದುಕೊಳ್ಳ ಬೇಕು ಎಂದು ಸದಸ್ಯರು ಸಭೆಯಲ್ಲಿ ಒತ್ತಾಯಿಸಿದರು.

ಕೆಲವು ಅಕ್ಕಿ ಗಿರಾಣಿಯವರು ಸಾಮಾನ್ಯ ಅಕ್ಕಿಗೆ ಕಾವೆಗೆ ಬಳಸುವ ರಾಸಾ ಯಿನಿಕ ಬಳಸಿ ಕೆಂಪು ಮಾಡುತ್ತಾರೆ. ಇದು ಅಪಾಯ ಕಾರಿಯಾದ ರಾಸಾಯ ನಿಕವಾಗಿದೆ. ಕೆಂಪಕ್ಕಿಯನ್ನು ಕೇರಳ, ಕರಾವಳಿ ಮತ್ತು ಶಿವಮೊಗ್ಗದಲ್ಲಿ ಮಾತ್ರ ಬೆಳೆಸಲಾಗುತ್ತದೆ. ಪಡಿತರದಲ್ಲಿ ಕೆಂಪಕ್ಕಿ ನೀಡುವ ಬಗ್ಗೆ ಸರಕಾರಕ್ಕೆ ಪತ್ರ ಬರೆದು ಗಮನಕ್ಕೆ ತರಲಾಗುವುದು ಎಂದು ಮೋಹನ್‌ರಾಜ್ ಸಭೆಗೆ ತಿಳಿಸಿದರು.

ಧನಂಜಯ್ ಕುಂದರ್ ಮಾತನಾಡಿ, ನೇಜಾರಿನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಕ್ರಮ ತೆಗೆದುಕೊಳ್ಳ ಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಕುಂದಾಪುರ ಉಪವಿಭಾಗಾಧಿ ಕಾರಿಗಳನ್ನು ನೇರ ವಾಗಿ ಭೇಟಿ ಮಾಡಿ ಮನವಿ ಮಾಡಲು ಅಧಿಕಾರಿಳು ಸದಸ್ಯರಿಗೆ ಸಲಹೆ ನೀಡಿದರು.

ಇತ್ತೀಚೆಗೆ ನಡೆದ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿ ಸದಸ್ಯರಾಗಿ ಆಯ್ಕೆ ಯಾಗಿರುವ ತಾಪಂ ಸದಸ್ಯ ಲಕ್ಷ್ಮೀನಾರಾಯಣ ಪ್ರಭು ತನ್ನ ತಾಪಂ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದು, ಈ ರಾಜೀನಾಮೆ ವಿಚಾರವನ್ನು ತಾಪಂ ಕಾರ್ಯ ನಿರ್ವಹಣಾಧಿಕಾರಿ ಮೋಹನ್ ರಾಜ್ ಸಭೆಯಲ್ಲಿ ಪ್ರಸ್ತಾಪಿಸಿದರು. ಇದೇ ವೇಳೆ ಈ ರಾಜೀನಾಮೆಯ್ನು ಸದನ ಸಭೆಯು ಅಂಗೀಕರಿಸಿತು.

ಹಕ್ಕಿಜ್ವರದ ಬಗ್ಗೆ ಕಟ್ಟೆಚ್ಚರ: ಹಕ್ಕಿಜ್ವರಕ್ಕೆ ಸಂಬಂಧಿಸಿ ಉಡುಪಿ ತಾಲೂಕಿನಾ ದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಈವರೆಗೆ ನಮ್ಮಲ್ಲಿ ಯಾವುದೇ ಹಕ್ಕಿಜ್ವರ ಪ್ರಕರಣ ಗಳು ವರದಿಯಾಗಿಲ್ಲ ಎಂದು ಪಶುಸಂಗೋಪನಾ ಇಲಾಖೆಯ ಉಡುಪಿ ಸಹಾಯಕ ನಿರ್ದೇಶಕ ಡಾ.ಗೋಪಾಲಕೃಷ್ಣ ಭಟ್ ತಿಳಿಸಿದರು.

ಪಶುಸಂಗೋಪನೆ ಹಾಗೂ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಗಡಿ ಭಾಗದಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ಕೋಳಿ ಸಾಗಾಟದ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಕೇರಳದಿಂದ ಬರುವ ವಾಹನಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗು ತ್ತಿದೆ. ಅಲ್ಲಿಂದ ಬರುವ ವಾಹನಗಳಿಂಗ ಆ್ಯಂಟಿ ಬಯೋ ಟಿಕ್‌ನ್ನು ಸಿಂಪಡಿಸಲಾಗುತ್ತದೆ ಎಂದರು.

ಪ್ರತಿ ಫೌಲ್ಟ್ರಿ ಫಾರ್ಮ್‌ಗಳಿಗೆ ಭೇಟಿ ನೀಡಿ ಅಲ್ಲಿನ ಕೋಳಿಗಳ ಮಾದರಿಯನ್ನು ಸಂಗ್ರಹಿಸಿ ಬೆಂಗಳೂರು ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ಯಾವುದೇ ಪಕ್ಷಿಗಳು ಮೃತಪಟ್ಟ ಬಗ್ಗೆ ಮಾಹಿತಿ ಸಿಕ್ಕಿದರೆ ಅಂತಹ ಪಕ್ಷಿಗಳ ಮಾದರಿಯನ್ನು ಕೂಡ ಸಂಗ್ರಹಿಸಲಾಗುತ್ತದೆ ಎಂದು ಅವರು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ತಾಪಂ ಉಪಾಧ್ಯಕ್ಷ ಶರತ್ ಕುಮಾರ್ ಬೈಲಕೆರೆ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶಿಲ್ಪ ಆರ್.ಕೋಟ್ಯಾನ್, ತಾಪಂ ಲೆಕ್ಕ ಸಹಾಯಕ ಮೆಲ್ವಿನ್ ಥೋಮಸ್ ಹಾಜರಿದ್ದರು.

ಕೊರೋನ ಲಸಿಕೆ ಪಡೆಯಲು ಹಿಂದೇಟು

ತಾಲೂಕಿನಲ್ಲಿ ಕೆಲವರು ಕೊರೋನಾ ಲಸಿಕೆ ಪಡೆಯಲು ಮಾಹಿತಿ ಕೊರತೆ ಯಿಂದ ಹಿಂದೇಟು ಹಾಕುತ್ತಿದ್ದಾರೆ. ಅಂತವರಿಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ನಾಗ ರತ್ನ ತಿಳಿಸಿದ್ದಾರೆ.

ಈ ಲಸಿಕೆ ತೆಗೆದುಕೊಳ್ಳುವುದರಿಂದ ಯಾವುದೇ ಅಡ್ಡಪರಿಣಾಮ ಇಲ್ಲ. ಅಂತಹ ಯಾವುದೇ ಪ್ರಕರಣಗಳು ನಮ್ಮಲ್ಲಿ ಕಂಡುಬಂದಿಲ್ಲ. ಗರ್ಭಿಣಿಯರು, ಮಗುವಿಗೆ ಹಾಲು ಉಣಿಸುವವರನ್ನು ಹೊರತುಪಡಿಸಿ ಉಳಿದವರು ಈ ಲಸಿಕೆ ಪಡೆಯಬಹು ದಾಗಿದೆ. ಕೆಲವು ಅಂಗನವಾಡಿ ಸಿಬ್ಬಂದಿಗಳು ಭಯ ಮತ್ತು ಅಪಪ್ರ ಚಾರದಿಂದಾಗಿ ಲಸಿಕೆ ತೆಗೆದುಕೊಳ್ಳಲು ನಿರಾಕರಿಸು ತ್ತಿದ್ದಾರೆ. ಇವರಿಗೆ ಮನವರಿಕೆ ಮಾಡುವ ಕಾರ್ಯ ನಡೆಸಲಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News