ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಕೇರಳ ಹೈಕೋರ್ಟ್ ನೋಟಿಸ್

Update: 2021-01-27 14:55 GMT

ತಿರುವನಂತಪುರ, ಜ.27: ಆನ್‌ಲೈನ್ ರಮ್ಮಿ ಗೇಮ್‌ಗಳನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿ ಕೇರಳ ಹೈಕೋರ್ಟ್ ಬುಧವಾರ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ನಟಿ-ನಟರಾದ ತಮನ್ನಾ ಭಾಟಿಯಾ ಹಾಗೂ ಅಜು ವರ್ಗೀಸ್‌ಗೆ ನೋಟಿಸ್ ಜಾರಿ ಮಾಡಿದೆ.

ಈ ಮೂವರು ಸೆಲೆಬ್ರಿಟಿಗಳು ಆನ್‌ಲೈನ್ ರಮ್ಮಿ ಆಟಗಳನ್ನು ಆಡುವ ವೇದಿಕೆಯನ್ನು ಸಮರ್ಥಿಸಿದ್ದರು.

 ಆನ್‌ಲೈನ್ ಬೆಟ್ಟಿಂಗ್ ಗಂಭೀರ ಸಾಮಾಜಿಕ ಪಿಡುಗು ಎಂದು ಒತ್ತಿ ಹೇಳಿದ ಹೈಕೋರ್ಟ್, ಈ ವಿಷಯದಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ರಾಜ್ಯ ಸರಕಾರವನ್ನು ಕೇಳಿದೆ.

ಕೊಚ್ಚಿ ಮೂಲದ ಪೌಲಿ ವಡಕ್ಕನ್ ಸಲ್ಲಿಸಿದ್ದ ಅರ್ಜಿಯಲ್ಲಿ, ಆನ್‌ಲೈನ್ ರಮ್ಮಿ ಆಟಗಳು ಕಾನೂನಿಗೆ ವಿರುದ್ಧವಾಗಿವೆ ಹಾಗೂ ನಿಯಂತ್ರಿಸಲು ಕಷ್ಟವಾಗಿದೆ ಎಂದು ವಾದಿಸಿದರು. ಅಂತಹ ಆಟಗಳನ್ನು ನಡೆಸುವ ಕೆಲವು ವೇದಿಕೆಗಳು ಯುವಕರನ್ನು ಆಕರ್ಷಿಸಲು ಹಾಗೂ ಅವರನ್ನು ಆರ್ಥಿಕವಾಗಿ ಬಲೆಗೆ ಬೀಳಿಸಲು ಸೆಲೆಬ್ರಿಟಿಗಳನ್ನು ಬಳಸಿಕೊಳ್ಳುತ್ತಿವೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News