ಮುಂಬೈ-ಮಂಗಳೂರು ಸೆಂಟ್ರಲ್ ರೈಲು ಸಂಚಾರ 2 ತಿಂಗಳು ವಿಸ್ತರಣೆ

Update: 2021-01-27 14:59 GMT

ಉಡುಪಿ, ಜ. 27: ಮಂಗಳೂರು ಸೆಂಟ್ರಲ್ ಹಾಗೂ ಮುಂಬೈಯ ಲೋಕಮಾನ್ಯ ತಿಲಕ್ ನಡುವೆ ಸಂಚರಿಸುವ ದೈನಂದಿನ ಹಬ್ಬದ ವಿಶೇಷ ರೈಲು ಸಂಚಾರವನ್ನು ಇನ್ನೂ ಎರಡು ತಿಂಗಳು ವಿಸ್ತರಿಸಿ ಕೊಂಕಣ ರೈಲ್ವೆ ಆದೇಶ ಹೊರಡಿಸಿದೆ.

ರೈಲು ನಂ. 02620 ಮಂಗಳೂರು ಸೆಂಟ್ರಲ್- ಲೋಕಮಾನ್ಯ ತಿಲಕ್ ಸೂಪರ್‌ಫಾಸ್ಟ್ ಹಬ್ಬದ ವಿಶೇಷ ರೈಲಿನ ಸಂಚಾರವನ್ನು ಜ.31ರಿಂದ ಮಾ.31ರವರೆಗೆ ವಿಸ್ತರಿಸಲಾಗಿದೆ. ಅದೇ ರೀತಿ ನಂ. 02619 ಲೋಕಮಾನ್ಯ ತಿಲಕ್- ಮಂಗಳೂರು ಸೆಂಟ್ರಲ್ ಸೂಪರ್‌ಫಾಸ್ಟ್ ಹಬ್ಬದ ವಿಶೇಷ ರೈಲಿನ ಸಂಚಾರವನ್ನು ಫೆ.1ರಿಂದ ಎ.1ರವರೆಗೆ ವಿಸ್ತರಿಸಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಅದೇ ರೀತಿ ಎರ್ನಾಕುಲಂ ಜಂಕ್ಷನ್- ಓಕಾ ನಡುವೆ ವಾರಕ್ಕೆರಡು ಬಾರಿ ಸಂಚರಿಸುವ ಹಬ್ಬದ ವಿಶೇಷ ರೈಲಿನ ಸಂಚಾರವನ್ನು ಸಹ ಎ.3ರವರೆಗೆ ವಿಸ್ತರಿಲಾಗಿದೆ. ತಿರುನಲ್ವೇಲಿ-ದಾದರ್ ಸಾಪ್ತಾಹಿಕ ಸೂಪರ್‌ಫಾಸ್ಟ್ ರೈಲಿನ ಸಂಚಾರವನ್ನು ಸಹ ಎ.1ರವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News