ರಾಜ್ ಗುರು ಹೊಸಕೋಟೆಗೆ ಅರೆಹೊಳೆ ರಂಗಭೂಮಿ ಪ್ರಶಸ್ತಿ

Update: 2021-01-27 15:02 GMT

ಉಡುಪಿ, ಜ.27: ಮಂಗಳೂರಿನ ಅರೆಹೊಳೆ ಪ್ರತಿಷ್ಠಾನವು ಪ್ರತೀ ವರ್ಷ ರಂಗಭೂಮಿಯ ಸಾಧಕರಿಗೆ ನೀಡುವ ರಾಜ್ಯಮಟ್ಟದ ಅರೆಹೊಳೆ ರಂಗಭೂಮಿ ಪ್ರಶಸ್ತಿಯನ್ನು 2020ನೇ ಸಾಲಿಗೆ ಖ್ಯಾತ ರಂಗಕರ್ಮಿ, ಬೆಂಗಳೂರಿನ ರಾಜ್ ಗುರು ಹೊಸಕೆಟೆ ಅವರನ್ನು ಆಯ್ಕೆ ಮಾಡಲಾಗಿದೆ.

ಬೆಂಗಳೂರನ್ನು ಕೇಂದ್ರವಾಗಿರಿಸಿಕೊಂಡು ನಾಡಿನಾದ್ಯಂತ ತಮ್ಮ ಹೊಸಕೋಟೆ ಶೈಲಿಯ ಜಾನಪದ ಹಾಡುಗಳ ಮೂಲಕ ಕಾರ್ಯಕ್ರಮ ನೀಡುತ್ತಾ, ರಂಗ ಪಯಣ ಮತ್ತು ಸಾತ್ವಿಕ ಎಂಬ ಎರಡು ತಂಡಗಳ ಮೂಲಕ, ಪತ್ನಿ ನಯನ ಸೂಡರೊಂದಿಗೆ, ಪ್ರತೀ ವರ್ಷವೂ, ಸಮಕಾಲೀನ ಸಮಸ್ಯೆಗಳನ್ನು ತೆರೆದಿಡುವ ನಾಟಕ ನಿರ್ಮಾಣ, ನಿರ್ದೇಶನದಲ್ಲಿ ಪ್ರದರ್ಶನಗಳನ್ನು ನೀಡುತಿ ದ್ದಾರೆ. ಓರ್ವ ಸಂಘಟಕನಾಗಿಯೂ ರಾಜ್‌ಗುರು, ಶಂಕರ್‌ನಾಗ್ ನಾಟಕೋತ್ಸವ ಸೇರಿದಂತೆ ಹಲವಾರು ನಾಟಕೋತ್ಸವ, ಬೀದಿ ನಾಟಕಗಳ ಮೂಲಕ ಸಾಮಾಜಿ  ಜಾಗೃತಿಯನ್ನೂ ಮೂಡಿಸುತಿದ್ದಾರೆ.

ರಂಗಭೂಮಿಯಲ್ಲಿ ನಟನೆ, ನಿರ್ದೇಶನ, ಸಂಗೀತ ಸಂಯೋಜನೆ, ಗಾಯನ, ಸಂಘಟನೆ, ನಾಟಕ ರಚನೆ.... ಹೀಗೆ ಇವರ ಬಹುಮುಖಿ ಪ್ರತಿಭೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿಯು ಹತ್ತು ಸಾವಿರ ರೂ. ಪ್ರಶಸ್ತಿ ಮೊತ್ತ, ಫಲಕಗಳನ್ನೊಳಗೊಂಡಿರುತ್ತದೆ. ಫೆ.18ರಂದು ಮಂಗಳೂರಿನ ಪಾದುವಾ ಕಾಲೇಜಿನ ಬಯಲು ರಂಗ ಮಂದಿರದಲ್ಲಿ, ಅಸ್ತಿತ್ವ (ರಿ) ಮತ್ತು ಪಾದುವಾ ರಂಗ ಅಧ್ಯಯನ ಕೇಂದ್ರಗಳ ಸಹಯೋಗದೊಂದಿಗೆ ಅರೆಹೊಳೆ ಪ್ರತಿಷ್ಠಾನ ಹಾಗೂ ನಂದಗೋಕುಲ ಥಿಯೇಟರ್ ಸ್ಕೂಲ್ ಹಮ್ಮಿಕೊಂಡಿರುವ ದ್ವಿಭಾಷಾ ಅರೆಹೊಳೆ ನಾಟಕೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಗೌರವಾಧ್ಯಕ್ಷ ಹರಿಕೃಷ್ಣ ಪುರೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News