ಜ.30ರಿಂದ ಮಣಿಪಾಲ-ಬೆಂಗಳೂರು ನಡುವೆ ಮತ್ತೆ ವೋಲ್ವೋ ಸಾರಿಗೆ ಓಡಾಟ

Update: 2021-01-27 15:14 GMT

ಉಡುಪಿ, ಜ.27: ಮಣಿಪಾಲದಿಂದ ಉಡುಪಿ, ಮಂಗಳೂರು, ಹಾಸನ ಮಾರ್ಗವಾಗಿ ಬೆಂಗಳೂರಿಗೆ ಹಗಲು ವೇಳೆಯಲ್ಲಿ ಕ್ಲಬ್ ಕ್ಲಾಸ್ ವೋಲ್ವೋ ಸಾರಿಗೆ ಸೌಲಭ್ಯವನ್ನು ಜ.30ರಿಂದ ಆರಂಭಿಸಲಾಗುವುದು.

ಮಣಿಪಾಲದಿಂದ ಬೆಳಗ್ಗೆ 9:15ಕ್ಕೆ ಹೊರಟು ಉಡುಪಿ, ಮಂಗಳೂರು, ಹಾಸನ ಮಾರ್ಗವಾಗಿ ಸಂಜೆ 6 ಗಂಟೆಗೆ ಬೆಂಗಳೂರು ತಲುಪಲಿದೆ. ಮರು ಪ್ರಯಾಣದಲ್ಲಿ ಬೆಳಗ್ಗೆ 8 ಗಂಟೆಗೆ ಬೆಂಗಳೂರಿನಿಂದ ಹೊರಟು ಹಾಸನ, ಮಂಗಳೂರು, ಉಡುಪಿ ಮಾರ್ಗವಾಗಿ ಸಂಜೆ 4:30ಕ್ಕೆ ಮಣಿಪಾಲ ತಲುಪಲಿದೆ.

ನಿಗಮದ ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ಆರೋಗ್ಯದ ಹಿತದೃಷ್ಟಿಯಿಂದಾಗಿ ನಿಗಮದ ಎಸ್‌ಒಪಿ ನಿರ್ದೇಶನ ದಂತೆ ನಿಗಮದ ವಾಹನಗಳಲ್ಲಿ ಪ್ರಯಾಣಿಸಲು ಅವಕಾಶಗಳನ್ನು ಕಲ್ಪಿಸಲಾಗಿದ್ದು, ಸಾರ್ವಜನಿಕರು ಸಾರಿಗೆಯ ಸದುಪಯೋಗ ಪಡೆದುಕೊಳ್ಳುವಂತೆ ಮಂಗಳೂರು ಕರಾರಸಾಸಂ ವಿಭಾಗೀಯ ನಿಯಂ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News