ಸ್ವಸಹಾಯ ಗುಂಪಿನ ಸದಸ್ಯರು ಒಗ್ಗಟ್ಟಿನಿಂದ ಮುನ್ನಡೆದರೆ ಅಭಿವೃದ್ಧಿ : ಸಿಇಒ ಡಾ.ನವೀನ್ ಭಟ್

Update: 2021-01-27 15:17 GMT

ಉಡುಪಿ, ಜ.27: ಸ್ವಸಹಾಯ ಗುಂಪುಗಳ ಸ್ವ-ಉದ್ಯೋಗಿಗಳಿಗೆ ತರಬೇತಿ, ಮಾರುಕಟ್ಟೆ ವ್ಯವಸ್ಥೆಯ ಬಗ್ಗೆ ತರಬೇತಿ ಹಾಗೂ ಅಗತ್ಯ ಮಾರ್ಗದರ್ಶನ ನೀಡಲು ಇಲಾಖೆಗಳು ಸಿದ್ಧವಿದೆ. ಸ್ವಸಹಾಯ ಗುಂಪುಗಳು ಬೇಡಿಕೆಗನು ಗುಣವಾಗಿ ಉತ್ತಮ ಗುಣ ಮಟ್ಟದ ವಸ್ತುಗಳ ಉತ್ಪಾದನೆ ಮಾಡಬೇಕು. ಗುಂಪಿನ ಸದಸ್ಯರೆಲ್ಲರೂ ಒಗ್ಗಟ್ಟಿನಿಂದ ಮುನ್ನಡೆದಲ್ಲಿ ಗುಂಪಿನ ಎಲ್ಲಾ ಸದಸ್ಯರ ಜೀವನ ಮಟ್ಟವನ್ನು ಹೆಚ್ಚಿಸಲು ಸಾಧ್ಯವಾಗುವುದು ಎಂದು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ಹೇಳಿದ್ದಾರೆ.

ಉಡುಪಿ ಜಿಪಂ, ಕಾರ್ಕಳ ತಾಪಂ, ಗ್ರಾಮ ಪಂಚಾಯತ್ ನಿಟ್ಟೆ, ದೀಪ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳ ಸಹಯೋಗದಲ್ಲಿ ಮಂಗಳವಾರ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಪಂ ವ್ಯಾಪ್ತಿಯ ಸಮುದಾಯ ಭವನದಲ್ಲಿ, ನಿಟ್ಟೆ ಗ್ರಾಪಂ ಮಟ್ಟದ ಒಕ್ಕೂಟದ ಸ್ವಸಹಾಯ ಗುಂಪುಗಳ ಸದಸ್ಯರುಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸಂಜೀವಿನಿ ಮಾಹಿತಿ ಪತ್ರಗಳನ್ನು ಬಿಡುಡೆಗೊಳಿಸಿ ಅವರು ಮಾತನಾಡಿದರು.

ಜಿಪಂ ಸದಸ್ಯೆ ರೇಷ್ಮಾ ಉದಯ ಶೆಟ್ಟಿ ವಸ್ತು ಪ್ರದರ್ಶನ ಸ್ಟಾಲ್‌ಗಳನ್ನು ಉದ್ಘಾಟಿಸಿ ಮಾತನಾಡಿ, ಸ್ವಸಹಾಯ ಗುಂಪುಗಳ ಮುಖಾಂತರ ಮಹಿಳಾ ಸಬಲೀಕರಣದತ್ತ ಒಂದು ಹೆಜ್ಜೆಯನ್ನು ಗಣರಾಜ್ಯೋತ್ಸವದದಿ ಸಾಂಕೇತಿಕವಾಗಿ ಇಡೋಣ ಎಂದರು.

ಜಿಲ್ಲೆ ಹಾಗೂ ತಾಲೂಕಿನ ವಿವಿಧ ಸ್ವಸಹಾಯ ಗುಂಪುಗಳ ಸದಸ್ಯರುಗಳು ತಯಾರಿಸಿದ ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು. 

ಕಾರ್ಯಕ್ರಮದಲ್ಲಿ ಜಿಪಂ ಯೋಜನಾ ನಿರ್ದೇಶಕ ಎಂ.ಎನ್. ಗುರುದತ್, ಕಾರ್ಕಳ ತಾಪಂ ಕಾರ್ಯನಿರ್ವಹಣಾಧಿಕಾರಿ ಹರ್ಷ, ನೀತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಪುಷ್ಪಾಜೈನ್, ನಿಟ್ಟೆ ಗ್ರಾಪಂ ಪಿಡಿಓ ಶೇಖರ, ಸಹಾಯಕ ಯೋಜನಾಧಿಕಾರಿ ಜೇಮ್ಸ್ ಡಿ ಸಿಲ್ವ, ಜಿಪಂ ಸಮಾಲೋಚಕ ಪಾಂಡುರಂಗ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News