ಕ್ಷಯರೋಗ ಔಷಧ ವಿತರಣೆಗೆ ತರಬೇತಿ ಕಾರ್ಯಾಗಾರ

Update: 2021-01-27 15:19 GMT

ಉಡುಪಿ, ಜ.27: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ, ಜಿಲ್ಲಾ ಕ್ಷಯ ರೋಗ ನಿರ್ಮೂಲನ ಕೇಂದ್ರ ಉಡುಪಿ ಜಿಲ್ಲೆ, ಸಹಾಯಕ ಔಷದ ನಿಯಂತ್ರಣಾ ಇಲಾಖೆ ಉಡುಪಿ ವೃತ್ತ ಹಾಗೂ ಖಾಸಗಿ ಔಷಧ ವ್ಯಾಪಾರಸ್ಥರ ಸಂಘ ಕಾರ್ಕಳ ಇವರ ಸಹಯೋಗದಂದಿಗೆ ಕ್ಷಯ ರೋಗಕ್ಕೆ ಸಂಬಂದ ಪಟ್ಟ ಔಷಧ ವಿತರಣೆಯ ತರಬೇತಿ ಕಾರ್ಯಗಾರ ಬುಧವಾರ ತೆಳ್ಳಾರು ಕಸ್ತೂರಿ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ.ಕೃಷ್ಣಾನಂದ ಶೆಟ್ಟಿ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಕಾರ್ಕಳದಲ್ಲಿ ಯಶಸ್ವಿಯಾಗಿ ರೋಗಿಗಳ ಚಿಕಿತ್ಸೆಯನ್ನು ಮಾಡುವುದರೊಂದಿಗೆ ಕೋವಿಡ್ ಹರಡುವುದನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ. ಟಿಬಿಯಲ್ಲಿಯೂ ಸಹ ಮುಂದಿನ ದಿನಗಳಲ್ಲಿ ಕ್ಷಯರೋಗವನ್ನು ನಿರ್ಮೂಲನೆ ಮಾಡುವ ಸಲುವಾಗಿ ಖಾಸಗಿ ಸಹಾಗಿತ್ವದ ಅವಶ್ಯಕತೆಯಿದೆ ಎಂದರು.

ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿ ಡಾ.ಚಿದಾನಂದ ಸಂಜು, ಕ್ಷಯರೋಗದ ಲಕ್ಷಣ, ಹರಡುವ ಬಗೆ, ಕ್ಷಯರೋಗವನ್ನು ತಡೆಗಟ್ಟುವಲ್ಲಿ ಇಲಾಖೆಗೆ ಪೂರಕವಾಗಿ ಖಾಸಗಿ ಔಷಧ ವ್ಯಾಪಾರಸ್ಥರ ಪಾತ್ರದ ಬಗ್ಗೆ ತಿಳಿಸಿ, ತರಬೇತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.

ಕಾರ್ಕಳ ಖಾಸಗಿ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಜಿತ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಹಾಯಕ ಔಷಧ ನಿಯಂತ್ರಕ ಕೆ ವಿ ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಶ್ ಕೆ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದು. ಕೆ.ಅರವಿಂದ್ ರಾವ್ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News