ರಾಷ್ಟ್ರಮಟ್ಟದ ಆನ್‌ಲೈನ್ ಇ ಕಟಾ ಸ್ಪರ್ಧಾಕೂಟದಲ್ಲಿ ಪದಕ

Update: 2021-01-27 15:39 GMT

ಕಾಪು, ಜ.27: ಜಪಾನ್ ಶೊಟೊಕಾನ್ ಕರಾಟೆ ಡು ಕನ್ನಿಂಜುಕು ಆರ್ಗ ನೈಸೇಷನ್ ಇಂಡಿಯಾ ಮಹಾರಾಷ್ಟ ಇದರ ವತಿಯಿಂದ ಇತ್ತೀಚೆಗೆ ಏರ್ಪ ಡಿಸಲಾದ ರಾಷ್ಟ್ರಮಟ್ಟದ ಆನ್‌ಲೈನ್ ಇ ಕಟಾ ಸ್ಪರ್ಧಾಕೂಟದಲ್ಲಿ ಉಡುಪಿ ತಂಡವು 2 ಬೆಳ್ಳಿ, 13 ಕಂಚಿನ ಪದಕವನ್ನು ಗೆದ್ದುಕೊಂಡಿದೆ.

ಕಟಪಾಡಿ ಎಸ್‌ವಿಎಸ್ ಆಂಗ್ಲ ಮಾಧ್ಯಮ ಶಾಲೆಯ ಸ್ವೀಡಲ್ ಜೆನಿಶಾ ಪಿಂಟೋ ಮತ್ತು ದಂಡತೀರ್ಥ ಆಂಗ್ಲ ಮಾಧ್ಯಮ ಶಾಲೆಯ ಫಾತಿಮ ಸದಾಫ್ ಬೆಳ್ಳಿ ಪದಕ, ಕಟಪಾಡಿ ಎಸ್‌ವಿಎಸ್ ಆಂಗ್ಲ ಮಾಧ್ಯಮ ಶಾಲೆಯ ಚಿರಾಗ್ ಮೆಂಡನ್, ಶಾನೊನ್ ಜೆವಿನ್ ಪಿಂಟೋ, ಸಾಜನ್ ಬಹದ್ದೂರು, ಚಂದ್ರ ನಗರ ಕ್ರೆಸೆಂಟ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಮುಹಮ್ಮದ್ ಅದ್ನಾನ್, ಮುಹಮ್ಮದ್ ಸಯೀದ್, ಅಯ್ಮನ್ ಅಹಮದ್, ಅಬ್ದುಲ್ ಮುಹಮ್ಮದ್ ರಿಜ್ವಾನ್, ಕೋಡಿ ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್‌ನ ಮುಹಮ್ಮದ್ ಶಾಹಿದ್ ಅಫ್ರೀದ್, ಮುಹಮ್ಮದ್ ಅಜೀಮ್ ಖಾನ್, ಉಚ್ಚಿಲ ಮಹಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆಯ ನಿತಿನ್ ಶೆಟ್ಟಿ, ಮುಹಮ್ಮದ್ ಹಯಾನ್, ದಂಡ ತೀರ್ಥ ಶಾಲೆಯ ಮುಹಮ್ಮದ್ ಸಿಮಕ್ ಹುಸೈನ್, ಕಿಲ್ಬಾಡಿ ಮೆಡಿಲಿನ್ ಪ್ರಿ ಯುನಿವರ್ಸಿಟಿ ಕಾಲೇಜಿನ ಪ್ರಣಯ್ ಪುತ್ರನ್ ಬೆಳ್ಳಿಯ ಪದಕಗಳನ್ನು ಪಡೆದು ಕೊಂಡಿದ್ದಾರೆ. ಇವರು ಕರ್ನಾಟಕ ರಾಜ್ಯ ಮುಖ್ಯ ಶಿಕ್ಷಕ ಮತ್ತು ಪರೀಕ್ಷಕ ಶಂಶುದ್ದೀನ್ ಎಚ್.ಶೇಕ್ ಬಳಿ ತರಬೇತಿಯನ್ನು ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News