ಹೂಡೆ: ಜಮಾಅತೆ ಇಸ್ಲಾಮಿ ಹಿಂದ್‌ ವತಿಯಿಂದ ಬಿಲ್ಲವ ಕುಟುಂಬಕ್ಕೆ ಮನೆ ಹಸ್ತಾಂತರ

Update: 2021-01-27 15:44 GMT

ಹೂಡೆ : ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ವತಿಯಿಂದ ಪಡು ತೋನ್ಸೆ ಬೆಂಗ್ರೆಯ ಬಡ ಬಿಲ್ಲವ ಕುಟುಂಬವೊಂದಕ್ಕೆ ಮನೆ ನಿರ್ಮಿಸಿ ಇಂದು ಹಸ್ತಾಂತರಿಸಲಾಯಿತು.

ಜಮಾಅತೆ ಇಸ್ಲಾಮಿ ಹಿಂದ್ ಮಾಜಿ ರಾಜ್ಯಾಧ್ಯಕ್ಷ ಅತಾವುಲ್ಲಾ ಷರೀಫ್ ಫಲಾನುಭವಿ ಶಕುಂತಲಾ ಅವರಿಗೆ ಮನೆ ಹಸ್ತಾಂತರಿಸಿ ಶುಭ ಹಾರೈಸಿದರು. ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಶಾಖೆ ಅಧ್ಯಕ್ಷ ಅಬ್ದುಲ್ ಖಾದೀರ್ ಮಾತನಾಡಿ, ಇಸ್ಲಾಮಿನ ಪವಿತ್ರ ಗ್ರಂಥ ಅನಾಥರಿಗೆ, ದೀನ ದಲಿತರಿಗೆ ನೆರ ವಾಗಲು ಬೋಧಿಸುತ್ತದೆ. ಅದು ನಮ್ಮ ಕೆಲಸಕ್ಕೆ ಪ್ರೇರಣೆ ಎಂದರು.

ನೆರೆ ಮನೆಯವರು ಹಸಿದಿರುವಾಗ ಉಂಡು ಮಲಗುವವನು ಮುಸ್ಲಿಮ ನಾಗಲು ಸಾಧ್ಯವಿಲ್ಲ ಎಂಬ ಆದರ್ಶೀಯ ಮೌಲ್ಯವನ್ನು ಪ್ರವಾದಿಯವರು ನಮಗೆ ಬೋಧಿಸಿದ್ದಾರೆ. ಅವರ ಬೋಧನೆಯ ಸಾರದಂತೆ ನಾವು ಜಾತಿ ಮತ ಬೇಧವೆನ್ನದೆ ನಮ್ಮ ಕೈಯಲ್ಲಾದ ಸಹಾಯ ಮಾಡುತ್ತಿದ್ದೇವೆ ಎಂದರು.

ತಾಪಂ ಸದಸ್ಯೆ ಸುಲೋಚನಾ, ಗ್ರಾಪಂ ಸದಸ್ಯ ಹೈದರ್ ಹೂಡೆ, ಮಾಜಿ ಗ್ರಾಪಂ ಸದಸ್ಯ ಗಂಗಾಧರ, ಹೂಡೆ ಬಿಲ್ಲವ ಸಂಘ ಅಧ್ಯಕ್ಷ ಶಂಕರ್ ಅಂಚನ್, ಅನ್ವರ್ ಅಲಿ ಕಾಪು, ಪಂಚಾಯತ್ ಕಾರ್ಯದರ್ಶಿ ದಿನಕರ್ ಬೆಂಗ್ರೆ ಶುಭ ಹಾರೈಸಿದರು. ಇದ್ರಿಸ್ ಹೂಡೆ ಪ್ರಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ವಿಜಯ್, ಡಾ.ಫಹೀಮ್, ಧಿರೇಂದ್ರ, ಪ್ರತಿಭಾ, ರವೂಫ್ ಹೂಡೆ, ಅಸ್ಲಮ್ ಹೈಕಾಡಿ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News