ಅಮೆರಿಕ ಸಂಸತ್‌ನ ಸಮಿತಿಗಳಿಗೆ ಭಾರತ ಮೂಲದ ಸಂಸದರ ನೇಮಕ

Update: 2021-01-27 16:20 GMT

ವಾಶಿಂಗ್ಟನ್, ಜ. 27: ಭಾರತ ಮೂಲದ ಅವೆುರಿಕ ಸಂಸದರಾದ ಪ್ರಮೀಳಾ ಜಯಪಾಲ್ ಮತ್ತು ರಾಜಾ ಕೃಷ್ಣಮೂರ್ತಿಯನ್ನು ಅಮೆರಿಕ ಸಂಸತ್‌ನ ಬಜೆಟ್ ಮತ್ತು ಕೋವಿಡ್-19 ಸಾಂಕ್ರಾಮಿಕ ಕುರಿತ ಸಮಿತಿಗಳಿಗೆ ಮಂಗಳವಾರ ನೇಮಿಸಲಾಗಿದೆ.

55 ವರ್ಷದ ಪ್ರಮೀಳಾ ಜಯಪಾಲ್ ಪ್ರಭಾವಿ ಬಜೆಟ್ ಸಮಿತಿಗೆ ನೇಮಿಸಲ್ಪಟ್ಟರೆ, 47 ವರ್ಷದ ಕೃಷ್ಣಮೂರ್ತಿ ಕೊರೋನ ವೈರಸ್ ಬಿಕ್ಕಟ್ಟು ಕುರಿತ ಕಾಂಗ್ರೆಸ್ ಸಮಿತಿಗೆ ಆಯ್ಕೆಯಾದರು.

ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಈ ನೇಮಕಗಳನ್ನು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News