ಮಂಗಳೂರಿನಲ್ಲಿ ಎರಡು ಬೈಕ್ ಕಳವು

Update: 2021-01-27 16:42 GMT

ಮಂಗಳೂರು, ಜ.27: ಪ್ರೀತಂ ಸಲ್ದಾನ ಎಂಬವರು ಜ.22ರಂದು ರಾತ್ರಿ 10 ಗಂಟೆಗೆ ನೀರುಮಾರ್ಗ ಗ್ರಾಮದ ಮಾನೂರುನಲ್ಲಿ ಮನೆಯ ಬಳಿ ಬೈಕ್ ಪಾರ್ಕ್ ಮಾಡಿದ್ದು, ಮರುದಿನ ಬೆಳಗ್ಗೆ ನೋಡುವಾಗ ಕಳವಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ನವೀನ್ ಗಣಪತಿ ಚನ್ನಯ್ಯ ಅವರು ಚಿಲಿಂಬಿಯ ಪಿಜಿ ಆವರಣದೊಳಗೆ ಜ.25ರಂದು ರಾತ್ರಿ ಪಾರ್ಕ್ ಮಾಡಿದ್ದ ಹೋಂಡಾ ಹಾರ್ನೆಟ್ ಬೈಕನ್ನು ಕಳವು ಮಾಡಲಾಗಿದೆ. ಮರುದಿನ ಬೆಳಗ್ಗೆ ಬೈಕ್ ಕಳವಾಗಿರುವುದು ಗಮನಕ್ಕೆ ಬಂದಿದೆ. ಇದರ ಅಂದಾಜು ಮೌಲ್ಯ 75 ಸಾವಿರ ರೂ. ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News