ಗಣರಾಜ್ಯೋತ್ಸವ ಪ್ರಯುಕ್ತ ಬಹುಭಾಷಾ ಕವಿಗೋಷ್ಠಿ

Update: 2021-01-27 16:47 GMT

ಮಂಗಳೂರು, ಜ.27: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇದರ ಆಶ್ರಯದಲ್ಲಿ ನಗರದ ಶಾರದಾ ವಿದ್ಯಾಲಯದಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಬಹುಭಾಷಾ ಕವಿಗೋಷ್ಠಿಯು ಮಂಗಳವಾರ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಂ.ಬಿ.ಪುರಾಣಿಕ್ ಜನರಲ್ಲಿ ಭಾಷೆಯ ಮೇಲೆ ಅಭಿಮಾನ ಹಾಗೂ ಚಿಂತನೆಯು ಈ ಕವಿಗೋಷ್ಠಿಯ ಹಿಂದೆ ಇದೆ. ಕರ್ನಾಟಕ ವಿಭಿನ್ನ ಭಾಷೆಗಳ ಮನೆ. ಭಾಷೆಗಳನ್ನು ಉಳಿಸುವ ಕಾರ್ಯದಲ್ಲಿ ಕನ್ನಡಿಗರ ಮಹತ್ತರ ಸೇವೆ ಇದೆ ಎಂದರು.

ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ರಮೇಶ್ ರಾವ್ ಕೈಕಂಬ, ಶೈಲಾ ಕುಮಾರಿ, ವಾಲ್ಟರ್ ಫೆಲಿಕ್ಸೃ್ ಅಲ್ಬುಕರ್ಕ್ ಗಂಜಿಮಠ, ಸಾವಿತ್ರಿ ರಮೇಶ್ ಭಟ್ ಸುರತ್ಕಲ್, ಜ್ಯೂಲಿಯಟ್ ಎಂ.ಎಂ.ಫೆರ್ನಾಂಡಿಸ್,ರಮ್ಯಾಶ್ರೀ ನಡುಮನೆ, ಸಲೀಂ ಮಾಣಿ ಕವನ ವಾಚಿಸಿದರು.

ಅಬ್ದುಲ್ ಅಝೀಝ್, ನಿತ್ಯಾನಂದ ಕಾರಂತ, ವಿಜಯಲಕ್ಷ್ಮಿ ಶೆಟ್ಟಿ, ಪೂರ್ಣಿಮಾ ರಾವ್, ಆಶಾಲತಾ ಕಾಮತ್, ರಮೇಶ್ ರಾವ್, ಡಾ.ಕೊಳ್ಚಪ್ಪೆಗೋವಿಂದ ಭಟ್, ಎಂ.ವಾಸುದೇವ ರಾವ್ ಉಪಸ್ಥಿತರಿದ್ದರು. ರಜನಿ ಶೆಣೈ ಅವರನ್ನು ಗೌರವಿಸಲಾಯಿತು. ದಯಾನಂದ ಕಟೀಲು ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News