ದಾರುನ್ನೂರ್ ಮಂಗಳೂರು ವಲಯ ಸಮಿತಿಗೆ ಆಯ್ಕೆ

Update: 2021-01-27 16:49 GMT

ಮಂಗಳೂರು, ಜ.27: ಕಾಶಿಪಟ್ಣದ ದಾರುನ್ನೂರ್ ಎಜುಕೇಶನ್ ಸೆಂಟರ್‌ನ ಮಂಗಳೂರು ವಲಯ ಸಮಿತಿಯ ನೂತನ ಅಧ್ಯಕ್ಷರಾಗಿ ಸಾಲಿಹ್ ತಂಙಳ್ ಆಯ್ಕೆಯಾದರು.

ಸಂಸ್ಥೆಯ ಅಧ್ಯಕ್ಷ ಖಾಝಿ ತ್ವಾಖಾ ಅಹ್ಮದ್ ಅಲ್ಅಝ್ಹರಿ ಅಧ್ಯಕ್ಷತೆಯಲ್ಲಿ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.

ಅತಿಥಿಯಾಗಿ ಭಾಗವಹಿಸಿದ ಕೇಂದ್ರ ಜುಮಾ ಮಸೀದಿಯ ಖತೀಬ್ ಸ್ವದಖತುಲ್ಲಾ ಫೈಝಿ ಶೈಕ್ಷಣಿಕ ಪ್ರಗತಿಯ ಮೂಲಕ ಹಿಂದುಳಿದ ವರ್ಗದ ಸಬಲೀಕರಣ ಸಾಧ್ಯವಿದೆ. ಮುಂದಿನ ದಿನಗಳಲ್ಲಿ ಶಿಕ್ಷಣದಿಂದ ವಂಚಿತರಾದವರಿಗೆ ನೇತೃತ್ವ ನೀಡಲು ಸಂಸ್ಥೆಯ ವಿದ್ಯಾರ್ಥಿಗಳು ಅರ್ಹರಾಗುವುದರಲ್ಲಿ ಸಂಶಯವಿಲ್ಲ. ಉಚಿತ ಶಿಕ್ಷಣ ನೀಡುವ ಸಂಸ್ಥೆಯ ಏಳಿಗೆಯಲ್ಲಿ ಸಮುದಾಯದ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಮಂಗಳೂರು ವಲಯ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಹಾಜಿ ಮುಹಮ್ಮದ್ ಹನೀಫ್ ಬಂದರ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬ್ದುಲ್ ರಝಾಕ್ ಹಾಜಿ, ಅಬ್ದುಸ್ಸಮದ್ ಹಾಜಿ, ಅದ್ದು ಹಾಜಿ, ಐ ಮೊಹಿದಿನಬ್ಬ ಹಾಜಿ, ಫಕೀರಬ್ಬ ಮಾಸ್ಟರ್, ಅಬ್ದುಲ್ ರಶೀದ್ ಹಾಜಿ, ಅಬ್ದುಲ್ ಖಾದರ್ ಹಾಜಿ ಎ.ಕೆ., ಸುಹೈಲ್, ಅಬ್ಬಾಸ್, ಹಂಝ, ಅಬ್ದುಲ್ ರಹ್ಮಾನ್, ಮಿಹ್ರಾಜ್, ಫೈಝಲ್ ಕುತ್ತಾರ್, ಹಾರಿಸ್ ಹಾಜಿ, ರಿಝ್ವಾನ್ ಕೊಯ್ಯುರ್, ಮಕ್ಸೂದ್ ಇಂಜಿನಿಯರ್, ಇಬ್ರಾಹಿಂ ಆಯ್ಕೆಯಾದರು.

ಈ ಸಂದರ್ಭ ಸಂಸ್ಥೆಯ ಶ್ರೇಯಾಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಹಾಜಿಯವರನ್ನು ಸನ್ಮಾನಿಸಲಾಯಿತು.

ದಾರುನ್ನೂರ್ ಸಂಸ್ಥೆಯ ಮುಖ್ಯ ಶಿಕ್ಷಕ ಹುಸೈನ್ ರಹ್ಮಾನಿ, ವ್ಯವಸ್ಥಾಪಕ ಅಬ್ದುಲ್ ಹಕೀಮ್, ಶಿಕ್ಷಕ ಮುಈನುದ್ದೀನ್ ಹುದವಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News