ಉತ್ತರ ಪ್ರದೇಶ ಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ತೀವ್ರ ಚಳಿಯಿಂದ ನಡುಗಿದ ವಿದ್ಯಾರ್ಥಿಗಳು

Update: 2021-01-27 16:56 GMT

ಕಾನ್ಪುರ, ಜ. 27: ಕಳೆದ ವಾರ ಸರಕಾರಿ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾಗ ಹಲವು ಸರಕಾರಿ ಶಾಲೆಯ ವಿದ್ಯಾರ್ಥಿಗಳು ತೀವ್ರ ಚಳಿಯಿಂದ ನಡುಗುತ್ತಿದ್ದರು ಎಂಬ ವರದಿ ಕುರಿತಂತೆ ದಾಖಲಿಸಲಾದ ಎಫ್‌ಐಆರ್‌ನಲ್ಲಿ ಉತ್ತರಪ್ರದೇಶದ ಕಾನ್ಪುರದ ಮೂವರು ಪತ್ರಕರ್ತರ ವಿರುದ್ಧ ‘ಸಾರ್ವಜನಿಕ ಕಿಡಿಗೇಡಿತನ’ ಹಾಗೂ ‘ಕ್ರಿಮಿನಲ್ ಬೆದರಿಕೆ’ ಆರೋಪ ಹೊರಿಸಲಾಗಿದೆ.

ಸ್ಥಳೀಯ ಟಿ.ವಿ. ಚಾನೆಲ್‌ನಲ್ಲಿ ಕಾರ್ಯ ನಿರ್ವಹಿಸಿತ್ತಿರುವ ಕಾನ್ಪುರ ದೆಹಾತ್ ಜಿಲ್ಲೆಯ ಪತ್ರಕರ್ತ ಈ ಸುದ್ಧಿಯನ್ನು ಚಾನೆಲ್‌ನಲ್ಲಿ ಪ್ರಸಾರ ಮಾಡಿದ್ದರು.

ಪೊಲೀಸರಿಗೆ ನೀಡಿದ ದೂರಿನಲ್ಲಿ ಜಿಲ್ಲಾ ಪ್ರಾಥಮಿಕ ಶಿಕ್ಷಣ ಅಧಿಕಾರಿ ಸುನೀಲ್ ದತ್, ಈ ಪತ್ರಕರ್ತರು ಕಾರ್ಯಕ್ರಮದಲ್ಲಿ ಹಾಜರಿರಲಿಲ್ಲ. ಆದರೆ, ‘ಉತ್ತರಪ್ರದೇಶ್ ದಿವಸ್’ ಅಥವಾ ರಾಜ್ಯ ಸ್ಥಾಪನಾ ದಿನಾಚರಣೆಯ ಹಿನ್ನೆಲೆಯಲ್ಲಿ ರವಿವಾರ ಆಯೋಜಿಸಲಾಗಿದ್ದ ಯೋಗ ಹಾಗೂ ವ್ಯಾಯಾಮ ಕಾರ್ಯಕ್ರಮವನ್ನು ತಪ್ಪಾಗಿ ನಿರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ.

 ಜಿಲ್ಲಾ ದಂಡಾಧಿಕಾರಿ, ರಾಜ್ಯ ಸಚಿವರು ಹಾಗೂ ಸ್ಥಳೀಯ ಶಾಸಕರು ಪಾಲ್ಗೊಂಡ ಕಾರ್ಯಕ್ರಮದ ವೀಡಿಯೊದಲ್ಲಿ ಮಕ್ಕಳು ತಮ್ಮ ಬೇಸಿಗೆಯ ಸಮವಸ್ತ್ರದಲ್ಲಿ, ಆಟಿಕೆ ಬಂದೂಕನ್ನು ಹಿಡಿದುಕೊಂಡಿರುವುದು ಕಂಡು ಬಂದಿದೆ.

ಕೊಠಡಿಯೊಂದರ ಇನ್ನೊಂದು ವೀಡಿಯೊದಲ್ಲಿ ಮಕ್ಕಳು ವ್ಯಾಯಾಮ ಮಾಡುತ್ತಿರುವುದು ದಾಖಲಾಗಿದೆ. ಮೂರನೇ ವೀಡಿಯೊದಲ್ಲಿ ಒಳಾಂಗಣದಲ್ಲಿ ಮಕ್ಕಳು ಬೇಸಿಗೆ ಸಮವಸ್ತ್ರದಲ್ಲಿ ಶಿರ್ಷಾಶನ ಮಾಡುವುದು ಕಂಡು ಬಂದಿದೆ.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲ ಅತಿಥಿಗಳು ಚಳಿಗಾಲದ ಉಡುಪಿನಲ್ಲಿ ಕಂಡು ಬಂದಿದ್ದಾರೆ.

ಆದರೆ, ವ್ಯಾಯಾಮದ ಸಂದರ್ಭ ಮಾತ್ರ ವಿದ್ಯಾರ್ಥಿಗಳು ತಮ್ಮ ಚಳಿಗಾಲದ ಸಮವಸ್ತ್ರವನ್ನು ತೆಗೆದಿದ್ದಾರೆ ಎಂದು ದೂರಿನಲ್ಲಿ ಉತ್ತರಪ್ರದೇಶದ ಅಧಿಕಾರಿ ಪ್ರತಿಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News