ಎಂ.ಸಿ.ಸಿ‌ ಬ್ಯಾಂಕ್ ವತಿಯಿಂದ ಸರಕು, ಸೇವಾ ತೆರಿಗೆ ಕುರಿತ ವಿಚಾರ ಸಂಕಿರಣ

Update: 2021-01-27 17:16 GMT

ಮಂಗಳೂರು : ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕುರಿತು ವಿಚಾರ ಸಂಕಿರಣವನ್ನು ಎಂಸಿಸಿ ಬ್ಯಾಂಕ್ ಲಿಮಿಟೆಡ್ ವತಿಯಿಂದ ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಜ.23ರಂದು ಆಯೋಜಿಸಿತ್ತು.

ಬ್ಯಾಂಕಿನ ಎಲ್ಲಾ ಶಾಖೆಗಳ ಸಿಬ್ಬಂದಿ ಸದಸ್ಯರ ಅನುಕೂಲಕ್ಕಾಗಿ ಮತ್ತು ಇತ್ತೀಚಿನ ಬೆಳವಣಿಗೆಗಳ ಬದಲಾವಣೆಗಳ ಬಗ್ಗೆ ಅವರಿಗೆ ಅರಿವು ಮೂಡಿಸಲು ಜಿಎಸ್ಟಿ ನಿರ್ವಾಹಕ ಕಚೇರಿಯ ಹಿರಿಯ ಸಹಾಯಕ ಅಲೋಶಿಯಸ್ ಪಿಂಟೊ ಅವರ ಪ್ರಾರ್ಥನೆಯೊಂದಿಗೆ ಸೆಮಿನಾರ್ ಪ್ರಾರಂಭವಾಯಿತು.

ಸೆಮಿನಾರ್ ಅನ್ನು ದೀಪವನ್ನು ಬೆಳಗಿಸುವ ಮೂಲಕ ಸೇಂಟ್ ಅಲೋಶಿಯಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಎಸ್.ಜೆ. ಪ್ರವೀಣ್ ಮಾರ್ಟಿಸ್ ಉದ್ಘಾಟಿಸಿದರು.

ವಿಚಾರ ಸಂಕಿರಣದ ಅಧ್ಯಕ್ಷ ತೆಯನ್ನು  ಎಂ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಅಧ್ಯಕ್ಷತೆ ವಹಿಸಿದ್ದರು. ಬ್ಯಾಂಕ್‌ನ ನಿರ್ದೇಶಕರಾದ ಮಾರ್ಸೆಲ್ ಡಿಸೋಜಾ, ಹೆರಾಲ್ಡ್ ಮೊಂತೆರೊ, ವೃತ್ತಿಪರ ನಿರ್ದೇಶಕ ಸಿ.ಜಿ. ಪಿಂಟೊ, ಜನರಲ್ ಮ್ಯಾನೇಜರ್ ಸುನಿಲ್ ಮೆನೆಜೆಸ್. ಡಿಪ್ಯೂಟಿ ಜನರಲ್ ಮ್ಯಾನೇಜರ್ ರಾಜ್ ಎಫ್ ಮೆನೆಜೆಸ್ ಉಪಸ್ಥಿತರಿದ್ದರು ಮುಖ್ಯ ಲೆಕ್ಕಪರಿಶೋಧಕ ಕಾರ್ಯನಿರ್ವಾ ಹಕ ಕಿರಣ್ ಕ್ರಾಸ್ಟಾ, ಸಿಎ ವಿವಿಯನ್ ಪಿಂಟೊ, ಸಿಎ ಲವೀನ್  ತೌವ್ರೋ, ಜಿಎಸ್ಟಿಯಲ್ಲಿನ ಇತ್ತೀಚಿನ ಬದಲಾವಣೆಗಳ ವಿವರಗಳನ್ನು ನೀಡುವ ಮೂಲಕ ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.

ಅಧಿವೇಶನವು 2 ಗಂಟೆಗಳ ಕಾಲ ನಡೆಯಿತು ಮತ್ತು ನಂತರ ಪ್ರಶ್ನೋತ್ತರ ಅಧಿವೇಶನ. ಎಲ್ಲಾ ಅಕೌಂಟೆಂಟ್‌ಗಳು ಮತ್ತು  ಸಿಬ್ಬಂದಿ ಸೇರಿ ಒಟ್ಟು 60  ಸದಸ್ಯರು  ಸೆಮಿನಾರ್‌ನಲ್ಲಿ ಭಾಗವಹಿಸಿದ್ದಾರೆ.ಸಂಪನ್ಮೂಲ ವ್ಯಕ್ತಿಗಳಾಗಿ  ಕಿರಣ್ ಕ್ರಾಸ್ಟಾ ಮತ್ತು ಲವೀನ್ ಟೌರೊ ಸಂವಾದ ನಡೆಸಿ ಸವಿವರವಾದ ಮಾಹಿತಿ ನೀಡಿದರು.ಹಂಪನಕಟ್ಟೆ ಬ್ಯಾಂಕ್ ಶಾಖೆಯ ಹಿರಿಯ ಸಹಾಯಕ  ಮಿಲ್ಟನ್ ಸನಿಲ್ ಪಿರೇರಾ ಕಾರ್ಯಕ್ರಮ ನಿರೂಪಿಸಿದರು. ಜನರಲ್ ಮ್ಯಾನೇಜರ್ ಸುನಿಲ್ ಮೆನೆಜಸ್ ಅವರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News