ಮಲೇರಿಯ ಲಸಿಕೆ ಉತ್ಪಾದನೆಯನ್ನು ಭಾರತ್ ಬಯೋಟೆಕ್‌ಗೆ ಹಸ್ತಾಂತರಿಸಿದ ಜಿಎಸ್‌ಕೆ

Update: 2021-01-27 17:38 GMT

ಲಂಡನ್, ಜ. 27: ಜಗತ್ತಿನ ಪ್ರಥಮ ಪರಿಣಾಮಕಾರಿ ಮಲೇರಿಯ ಲಸಿಕೆಯ ಉತ್ಪಾದನೆಯನ್ನು ಭಾರತದ ಭಾರತ್ ಬಯೋಟೆಕ್‌ಗೆ ಹಸ್ತಾಂತರಿಸುವುದಾಗಿ ಬ್ರಿಟಿಶ್ ಔಷಧ ತಯಾರಿಕಾ ಕಂಪೆನಿ ಜಿಎಸ್‌ಕೆ ಬುಧವಾರ ತಿಳಿಸಿದೆ.

ಮಲೇರಿಯ ವಿರುದ್ಧದ ಲಸಿಕೆಯ ಅಭಿವೃದ್ಧಿಯನ್ನು ತ್ವರಿತಗೊಳಿಸುವ ಪ್ರಯತ್ನಗಳ ಭಾಗವಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅದು ಹೇಳಿದೆ.

ಲಸಿಕೆಯ ಪ್ರೊಟೀನ್ ಭಾಗವಾಗಿರುವ ಆರ್‌ಟಿಎಸ್,ಎಸ್/ಎಎಸ್01ರ ಉತ್ಪಾದನೆಯನ್ನು ಭಾರತ್ ಬಯೋಟೆಕ್‌ಗೆ ಹಸ್ತಾಂತರಿಸಲಾಗುವುದು. ಆದರೆ, ವ್ಯಾಕ್ಸಿನ್ ಬೂಸ್ಟರ್‌ನ ಉತ್ಪಾದನೆಯನ್ನು ಜಿಎಸ್‌ಕೆಯೇ ಮುಂದುವರಿಸುವುದು ಹಾಗೂ ಅದನ್ನು ಭಾರತ್ ಬಯೋಟೆಕ್‌ಗೆ ಪೂರೈಸಲಾಗುವುದು ಎಂದು ಜಿಎಸ್‌ಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News