ಟ್ರಂಪ್ ನಿಷೇಧವನ್ನು ಅನಿರ್ದಿಷ್ಟಾವಧಿಗೆ ಮುಂದುವರಿಸಿದ ಯೂಟ್ಯೂಬ್

Update: 2021-01-27 17:50 GMT

ಸ್ಯಾನ್‌ಫ್ರಾನ್ಸಿಸ್ಕೊ (ಅಮೆರಿಕ), ಜ. 27: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಖಾತೆಯನ್ನು ಯೂಟ್ಯೂಬ್ ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಿದೆ. ಅದೇ ವೇಳೆ, ಅವರ ವಕೀಲ ರೂಡಿ ಗಿಯುಲಿಯಾನಿಗೆ ತನ್ನ ವೀಡಿಯೊ ಕ್ಲಿಪ್‌ಗಳಿಂದ ಹಣ ಸಂಪಾದಿಸಲು ಸಾಧ್ಯವಾಗದಂತೆಯೂ ಅದು ಮಾಡಿದೆ.

ಟ್ರಂಪ್‌ರ ಚಾನೆಲ್ ಮೇಲಿನ ನಿಷೇಧವನ್ನು ವಿಸ್ತರಿಸುವುದಾಗಿ ಯೂಟ್ಯೂಬ್ ಹೇಳಿದ ಒಂದು ವಾರದ ಬಳಿಕ ಅದು ಈ ಕ್ರಮ ತೆಗೆದುಕೊಂಡಿದೆ. ಟ್ರಂಪ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ 30 ಲಕ್ಷ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿದ್ದಾರೆ.

ಜನವರಿ 6ರಂದು ಸಾವಿರಾರು ಟ್ರಂಪ್ ಬೆಂಬಲಿಗರು ಅಮೆರಿಕದ ಸಂಸತ್ ಮೇಲೆ ದಾಳಿ ನಡೆಸಿದ ಬಳಿಕ ಯೂಟ್ಯೂಬ್ ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮ ಕಂಪೆನಿಗಳು ಟ್ರಂಪ್‌ರ ಖಾತೆಗಳನ್ನು ಸ್ಥಗಿತಗೊಳಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News