ಕಾಟಿಪಳ್ಳ : ಯುವಕನಿಗೆ ದುಷ್ಕರ್ಮಿಗಳಿಂದ ಚೂರಿ ಇರಿತ

Update: 2021-01-28 04:12 GMT

ಮಂಗಳೂರು : ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಯುವಕನಿಗೆ ಚೂರಿಯಿಂದ ಇರಿದು ಪರಾರಿಯಾದ ಘಟನೆ ನಗರದ ಹೊರವಲಯದ ಕಾಟಿಪಳ್ಳ ಸಮೀಪ ಬುಧವಾರ ತಡ ರಾತ್ರಿ ನಡೆದಿದೆ.

ಕೃಷ್ಣಾಪುರ ನಿವಾಸಿ ಜಾಬಿರ್ (20) ಚೂರಿ ಇರಿತಕ್ಕೆ ಒಳಗಾದವರು.

ಬುಧವಾರ ತಡರಾತ್ರಿ ಬೈಕ್‌ ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಜಾಬಿರ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News