ತನ್ನ ಮತ್ತು ನರೇಂದ್ರ ಮೋದಿ ನಡುವಿನ ಮಾತುಕತೆಗಳನ್ನು ತಮ್ಮ ಆತ್ಮಕಥೆಯಲ್ಲಿ ಉಲ್ಲೇಖಿಸಿದ ಹಾಮಿದ್‌ ಅನ್ಸಾರಿ

Update: 2021-01-28 09:55 GMT

ಹೊಸದಿಲ್ಲಿ,ಜ.28: ಹಿಂದಿನ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ ತಮ್ಮ ಅಧಿಕಾರಾವಧಿ ವೇಳೆ ರಾಜ್ಯಸಭಾ ಸಭಾಪತಿಯೂ ಆಗಿದ್ದ ಸಂದರ್ಭ ಒಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಗೆ  ಭೇಟಿ ನೀಡಿದ್ದ ಸಂದರ್ಭ ನಡೆದ ಮಾತುಕತೆಗಳ ವೇಳೆ ಮಸೂದೆಗಳನ್ನು  ಗದ್ದಲದ ಸಂದರ್ಭ ಏಕೆ ಅಂಗೀಕಾರಗೊಳಿಸಲಾಗುತ್ತಿಲ್ಲ ಎಂದು ಪ್ರಶ್ನಿಸಿದ್ದರು ಎಂದು ಅನ್ಸಾರಿ ಅವರ ಇತ್ತೀಚೆಗೆ ಬಿಡುಗಡೆಯಾದ ಆತ್ಮಕಥನ ʼಬೈ ಮೆನಿ ಎ ಹ್ಯಾಪಿ ಆ್ಯಕ್ಸಿಡೆಂಟ್'ನಲ್ಲಿ ಅವರು ಬರೆದಿದ್ದಾರೆ.

ಗದ್ದಲದ ಸಂದರ್ಭ ಮಸೂದೆಗಳನ್ನು ಅಂಗೀಕರಿಸಲು ಅನುಮತಿಸದೇ ಇರುವ ತಮ್ಮ ನಿರ್ಧಾರದ ಕುರಿತು ಬರೆದಿರುವ ಅನ್ಸಾರಿ,  ಯುಪಿಎ ಹಾಗೂ ಎನ್‍ಡಿಎಗೆ ಅಸಮಾಧಾನ ಇದ್ದರೂ ಬಿಜೆಪಿ ಮಿತ್ರ ಕೂಟ ಮಾತ್ರ ಲೋಕಸಭೆಯಲ್ಲಿ ಅದಕ್ಕಿರುವ  ಬಹುಮತದಿಂದಾಗಿ ರಾಜ್ಯಸಭೆಯಲ್ಲಿರುವ ಕೆಲವೊಂದು ಪ್ರಕ್ರಿಯೆಗಳನ್ನು ಬದಿಗಿರಿಸುವ ನೈತಿಕ ಹಕ್ಕು ಇದೆ ಎಂದು ಅಂದುಕೊಂಡಿತ್ತು. "ಒಮ್ಮೆ ಮಾಹಿತಿ ನೀಡದೆಯೇ ಪ್ರಧಾನಿ ಮೋದಿ ನನ್ನ ರಾಜ್ಯಸಭಾ ಕಚೇರಿಗೆ ಆಗಮಿಸಿದ ಸಂದರ್ಭ ಇದೇ ಅಭಿಪ್ರಾಯವನ್ನು ನನಗೆ ಅಧಿಕಾರಾತ್ಮಕವಾಗಿ ಹಾಗೂ ಸ್ವಲ್ಪ ಮಟ್ಟಿಗೆ ಅಸಹಜತೆಯಿಂದಲೇ  ತಿಳಿಸಲಾಗಿತ್ತು," ಎಂದು ಅನ್ಸಾರಿ ಬರೆದಿದ್ದಾರೆ.

 "ಅಚ್ಚರಿಯಿಂದ ಹೊರ ಬಂದ ನಂತರ ನಾನು ಅವರ ಜತೆ ಕುಶಲೋಪರಿ ವಿಚಾರಿಸಿದೆ. ಆಗ ಅವರು ʼನಿಮ್ಮಿಂದ  ಹೆಚ್ಚಿನ ಜವಾಬ್ದಾರಿಯ ನಿರೀಕ್ಷೆಗಳಿವೆ ಆದರೆ ನೀವು ನನಗೆ ಸಹಾಯ ಮಾಡುತ್ತಿಲ್ಲ' ಎಂದರು  ರಾಜ್ಯಸಭೆ ಮತ್ತು ಹೊರಗಡೆ ನನ್ನ ಕೆಲಸ ಎಲ್ಲರಿಗೂ ತಿಳಿದಿದೆ ಎಂದು ನಾನು ಹೇಳಿದೆ ಆಗ ಅವರು "ಗದ್ದಲಗಲ ಸಂದರ್ಭದಲ್ಲಿ ಮಸೂದೆಗಳನ್ನು ಏಕೆ ಅಂಗೀಕರಿಸಲಾಗುತ್ತಿಲ್ಲ?" ಎಂದು ಪ್ರಶ್ನಿಸಿದ್ದರು ಎಂದು ಅನ್ಸಾರಿ ಬರೆದಿದ್ದಾರೆ.

2017ರಲ್ಲಿ ನರೇಂದ್ರ ಮೋದಿಯೊಂದಿಗೆ ಭೇಟಿಯಾದ ಕುರಿತು ಉಲ್ಲೇಖಿಸಿದ ಅವರು, ನಾನು ಎನ್.ಎಮ್.ಸಿ ಚೇರ್‌ ಮ್ಯಾನ್‌ ಆಗಿದ್ದ ಸಂದರ್ಭ ನರೇಂದ್ರ ಮೋದಿಯೊಂದಿಗೆ "ಗುಜರಾತ್‌ ಹತ್ಯಾಂಕಾಡ ನಡೆಯಲು ಕಾರಣವೇನು? ನೀವು ಅದಕ್ಕೆ ಅನುವು ಮಾಡಿಕೊಡಲು ಕಾರಣವೇನು? ಎಂದು ಕೇಳಿದೆ. ಆಗ ಉತ್ತರಿಸಿದ ಮೋದಿ, "ಜನರು ಒಂದು ಘಟನೆಯನ್ನು ಹಲವು ಆಯಾಮಗಳಲ್ಲಿ ನೋಡುತ್ತಾರೆ. ನಾವು ಮಾಡಿರುವ ಒಳ್ಳೆಯ ಕೆಲಸಗಳನ್ನು ಅವರು ನೋಡುವುದಿಲ್ಲ. ಮುಸ್ಲಿಂ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಾವು ಕೈಗೊಂಡಿರುವ ಕಾರ್ಯಗಳ ಕುರಿತು ಮಾತನಾಡುವುದಿಲ್ಲ. ಎಂದು ಹೇಳಿಕೆ ನೀಡಿದ್ದರು ಎಂದು ಹಾಮಿದ್ ಅನ್ಸಾರಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News