​ಸಿಟಿ ಗೋಲ್ಡ್ : ‘ಮೆಗಾ ಮಂಗಳೂರು ಫೀಸ್ಟ್’ ಸಮಾರೋಪ

Update: 2021-01-28 15:27 GMT

ಮಂಗಳೂರು, ಜ.28: ಪ್ರತಿಷ್ಠಿತ ಆಭರಣ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಸಿಟಿ ಗೋಲ್ಡ್‌ನ 20ನೇ ವಾರ್ಷಿಕೋತ್ಸವ ಪ್ರಯುಕ್ತ ನಗರದ ಕಂಕನಾಡಿ ಬೈಪಾಸ್ ರಸ್ತೆಯಲ್ಲಿನ ಸಿಟಿ ಗೋಲ್ಡ್ ಮಳಿಗೆಯಲ್ಲಿ ಬರೋಬ್ಬರಿ ಎರಡು ತಿಂಗಳುಗಳಿಂದ ನಿರಂತರ ಆಯೋಜಿಸಲಾದ ‘ಮೆಗಾ ಮಂಗಳೂರು ಫೀಸ್ಟ್’ ಕಂಕನಾಡಿಯ ಮಳಿಗೆಯಲ್ಲಿ ಗುರುವಾರ ಸಂಜೆ ಸಮಾರೋಪಗೊಂಡಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಹಿದಾಯ ಫೌಂಡೇಶನ್‌ನ ಅಧ್ಯಕ್ಷ ಮನ್ಸೂರ್ ಅಹ್ಮದ್ ಆಝಾದ್, ಸಂಸ್ಥೆಯು ವ್ಯಾಪಾರದ ಜೊತೆಗೆ ಸಮಾಜ ಸೇವೆಯಲ್ಲೂ ಗುರುತಿಸಿಕೊಂಡಿರುವುದು ಸ್ವಾಗತಾರ್ಹ. ಜನರ ಪ್ರೀತಿ, ವಿಶ್ವಾಸ ಗಳಿಸಲು ಸಂಸ್ಥೆಯು ಡೈಮಂಡ್ ರಿಂಗ್ ಸಹಿತ ವಿವಿಧ ಕೊಡುಗೆಗಳನ್ನು ನೀಡುತ್ತಿದೆ. ಸಂಸ್ಥೆಯು ಗ್ರಾಹಕ ಸ್ನೇಹಿ ಯಾಗಿ ಕೆಲಸ ಮಾಡುತ್ತಿದೆ. ವರ್ಷದಿಂದ ವರ್ಷಕ್ಕೆ ಸಂಸ್ಥೆ ಏಳಿಗೆ ಕಾಣುತ್ತಿದೆ. ಸಂಸ್ಥೆಯು ತನ್ನ ವ್ಯಾಪಾರ-ವಹಿವಾಟಿನ ಜಾಲವನ್ನು ಮತ್ತಷ್ಟು ವಿಸ್ತರಿಸುವಂತಾಗಬೇಕು ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ ಮಾತನಾಡಿ, ಸಿಟಿ ಗೋಲ್ಡ್ ಸಂಸ್ಥೆಯು ಕೇವಲ ಆಭರಣ ಸಂಸ್ಥೆಯಾಗಿ ಕಾರ್ಯಾಚರಿಸುವುದಲ್ಲದೆ, ಸಮಾಜ ಸೇವೆಯಲ್ಲೂ ಗುರುತಿಸಿಕೊಂಡಿದೆ. ಬಡವರಿಗೆ ಮನೆ ನಿರ್ಮಿಸಿ ಕೊಡುವುದು, ವಿವಾಹ ಕಾರ್ಯಕ್ರಮ ಆಯೋಜಿಸುವ ಮೂಲಕ ಮಾದರಿಯಾಗಿದೆ ಎಂದರು.

ಎಸ್‌ಡಿಪಿಐ ಜಿಲ್ಲಾ ಅಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಮಾತನಾಡಿ, ಚಿನ್ನ ಖರೀದಿಯು ಶ್ರೀಮಂತರಿಗೆ ಮಾತ್ರ ಸೀಮಿತವಾಗದೆ ಬಡವರು, ಮಧ್ಯಮ ವರ್ಗದ ಜನರಿಗೂ ಕೈಗೆಟುಕುವ ದರದಲ್ಲಿ ಯೋಜನೆ ರೂಪಿಸಿರುವುದು ಸಿಟಿ ಗೋಲ್ಡ್‌ನ ಹೆಗ್ಗಳಿಕೆಯಾಗಿದೆ. ಇಂತಹ ಯೋಜನೆಯಿಂದ ಎಲ್ಲರಿಗೂ ಚಿನ್ನಯು ಸದಾವಕಾಶವನ್ನು ಸಂಸ್ಥೆ ದೊರಕಿಸಿ ಕೊಟ್ಟಿದೆ. ಭವಿಷ್ಯದಲ್ಲಿ ಸಂಸ್ಥೆಯ ಇನ್ನಷ್ಟು ಮಳಿಗೆಗಳು ಆರಂಭಗೊಳ್ಳಲಿ ಎಂದು ಶುಭ ಹಾರೈಸಿದರು.

ಕಾಂಗ್ರೆಸ್‌ನ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಎನ್.ಎಸ್. ಕರೀಂ ಮಾತನಾಡಿ, ಸಿಟಿ ಗೋಲ್ಡ್ ತನ್ನದೇ ಆದ ಛಾಪು ಮೂಡಿಸಿದೆ. ವಿದ್ಯಾಭ್ಯಾಸ, ಬಡವರಿಗೆ ಸಹಾಯ ಮಾಡುತ್ತಿದ್ದಾರೆ. ಸಂಸ್ಥೆಯು ಇನ್ನಷ್ಟು ಯಶಸ್ಸು ಸಾಧಿಸಲಿ ಎಂದರು.

ಐ ಕೇರ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್‌ನ ಅಶ್ವಿನ್ ಜೆ. ಪೆರೇರಾ, ಆದರ್ಶ್ ಗ್ರೂಪ್ ಆಫ್ ಎಜುಕೇಶನಲ್ ಇನ್‌ಸ್ಟಿಟ್ಯೂಷನ್ ಮಿಜಾರು ಚೇರ್‌ಮನ್ ಮುಹಮ್ಮದ್ ಆಸಿಫ್ ಸುರಲ್ಪಾಡಿ, ಮಿತ್ತಬೈಲ್ ಜುಮ್ಮಾ ಮಸೀದಿ ಕೈಕಂಬ-ಬಿ.ಸಿ.ರೋಡ್‌ನ ಅಧ್ಯಕ್ಷ ಪಿ.ಮುಹಮ್ಮದ್ ಸಾಗರ್, ಉಳ್ಳಾಲದ ಸೈಯದ್ ಮದನಿ ದರ್ಗಾದ ಕಾರ್ಯದರ್ಶಿ ಮುಹಮ್ಮದ್ ತ್ವಾಹ ಹಾಜಿ, ನಂಡೆ ಪೆಂಙಳ್‌ನ ಅಧ್ಯಕ್ಷ ನೌಶಾದ್ ಹಾಜಿ ಸುರಲ್ಪಾಡಿ, ದುಬೈನ ಮೆಡಿಕಲ್ ಫಾರ್ಮಸಿಯ ಮಾಲಕ ಮನಾಫ್ ಕುಂದಾಪುರ, ಸಮಾಜ ಸೇವಕ ರಫೀಕ್ ಮಾಸ್ಟರ್, ಸ್ಥಳೀಯ ಕಾರ್ಪೊರೇಟರ್ ಸಂದೀಪ್ ಮತ್ತಿತರರು ಭಾಗವಹಿಸಿದ್ದರು.

ಮುಖ್ಯ ಅತಿಥಿಗಳು ಎಕ್ಸ್‌ಕ್ಲೂಸಿವ್ ಡೈಮಂಡ್ ನೆಕ್ಲೆಸ್‌ನ್ನು ಬಂಪರ್ ಬಹುಮಾನವಾಗಿ ಅದೃಷ್ಟಶಾಲಿ ಗ್ರಾಹಕ ಮುಶ್ರತ್ ಝಾಕಿರ್ ಕುದ್ರೋಳಿ ಅವರಿಗೆ ವಿತರಿಸಿದರು. ಗುರುವಾರದ ಲಕ್ಕೀ ವಿನ್ನರ್ ನಸೀಮಾ ಅವರಿಗೆ ಆಕರ್ಷಕ ಬಹುಮಾನ ವಿತರಿಸಲಾಯಿತು.

ಪಿಎಫ್‌ಎ ಮಾಸಿಕ ಸ್ಕೀಮ್ ವಿಜೇತ ಲೂಯಿಸ್ ರೊಡ್ರಿಗಸ್‌ಗೆ ಬೆಲೆಬಾಳುವ ವಾಚ್‌ನ್ನು ಕೊಡುಗೆಯಾಗಿ ನೀಡಲಾಯಿತು. 7ನೇ ಲಕ್ಕೀ ಡ್ರಾ ವಿಜೇತ ಅಬ್ದುಲ್ ಖಾದರ್ ಐನ್ ತೊಕ್ಕೊಟ್ಟು ವಿಜೇತ ಡೈಮಂಡ್ ರಿಂಗ್ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಿಟಿ ಗೋಲ್ಡ್ ಸಂಸ್ಥೆಯ ನಿರ್ದೇಶಕರಾದ ಮುಹಮ್ಮದ್ ಇರ್ಷಾದ್, ಇಕ್ಬಾಲ್ ಮದೀನ, ಮ್ಯಾನೇಜರ್ ಅಹ್ಮದ್ ಹಾಫೀಝ್, ಮಾರ್ಕೆಟಿಂಗ್ ಮ್ಯಾನೇಜರ್ ಇಮ್ರಾನ್ ವಿ., ಸಂಸ್ಥೆಯ ಸಿಬ್ಬಂದಿ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಿಟಿ ಗೋಲ್ಡ್‌ನ ನಿರ್ದೇಶಕ ದಿಲ್ಶಾದ್ ಸ್ವಾಗತಿಸಿದರು. ವಿಜೆ ಆಶಿಕ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News