ಎಟಿಎಂ ಕಾರ್ಡ್ ದುರ್ಬಳಕೆ, 19,600 ರೂ. ವಂಚನೆ: ದೂರು
Update: 2021-01-28 21:07 IST
ಉಡುಪಿ, ಜ.28: ಸಂಪತ್ ಕುಮಾರ ಶೆಟ್ಟಿ ಎಂಬವರ ಯೂನಿಯನ್ ಬ್ಯಾಂಕ್‌ನ ನೀಲಾವರ ಶಾಖೆಯ ಎಟಿಎಂ ಕಾರ್ಡ್‌ನ್ನು ಅಪರಿಚಿತ ವ್ಯಕ್ತಿಗಳು ದುರ್ಬಳಕೆ ಮಾಡಿ ಅವರ ಖಾತೆಯಿಂದ ಜ.18ರ ರಾತ್ರಿ ವೇಳೆ 100 ರೂ., 10,000ರೂ. ಹಾಗೂ 9,500ರೂ. ಸೇರಿ ಒಟ್ಟು 19.600ರೂ.ನ್ನು ಎಟಿಎಂನಿಂದ ವಿದ್‌ಡ್ರಾ ಮಾಡಿ ವಂಚಿಸಿದ್ದು, ಈ ಬಗ್ಗೆ ಅವರ ಮೊಬೈಲ್‌ಗೆ ಸಂದೇಶ ಬಂದಾಗಲಷ್ಟೆ ಅವರಿಗೆ ಗೊತ್ತಾಗಿದೆ. ಈ ಬಗ್ಗೆ ಸಂಪತ್ ಕುಮಾರ್ ಶೆಟ್ಟಿ ಅವರು ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.