‘ಬ್ಯಾರಿ ಲಿಪಿ ಕಲಿಕಾ ವಿಧಾನ: ಭಾಗ-2’ ಡಿವಿಡಿ ಬಿಡುಗಡೆ

Update: 2021-01-28 15:53 GMT

ಮಂಗಳೂರು, ಜ.28: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಹೊರತಂದ ‘ನೂತನ ಬ್ಯಾರಿ ಲಿಪಿ ಕಲಿಕಾ ವಿಧಾನ: ಭಾಗ-2’ ಡಿವಿಡಿ ಬಿಡುಗಡೆ ಕಾರ್ಯಕ್ರಮವು ಅಕಾಡಮಿಯ ಕಚೇರಿಯಲ್ಲಿ ಗುರುವಾರ ನಡೆಯಿತು.

ಡಿವಿಡಿ ಬಿಡುಗಡೆಗೊಳಿಸಿ ಮಾತನಾಡಿದ ಬ್ಯಾರಿ ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್, ಬ್ಯಾರಿ ಭಾಷೆಗೆ 1,400 ವರ್ಷಗಳ ಇತಿಹಾಸ ಇದೆ. ಈಗಾಗಲೇ ಹೊಸ ಲಿಪಿ ಹಾಗೂ ಕ್ಯಾಲೆಂಡರನ್ನು ಬಿಡುಗಡೆಗೊಳಿಸಲಾಗಿದೆ. ಬ್ಯಾರಿ ಭಾಷೆಯ ಲಿಪಿಯನ್ನು ಜನರು ಸುಲಭವಾಗಿ ಕಲಿಯುವ ಸಲುವಾಗಿ ಬ್ಯಾರಿ ಲಿಪಿ ಕಲಿಕಾ ವಿಧಾನದ ಮೊದಲ ಭಾಗದ ಡಿವಿಡಿಯನ್ನು ಈಗಾಗಲೇ ಬಿಡುಗಡೆ ಗೊಳಿಸಲಾಗಿದೆ. ಅದರಲ್ಲಿ ಸ್ವರಾಕ್ಷರ, ವ್ಯಂಜನಾಕ್ಷರ ಹಾಗೂ ಸಂಖ್ಯೆಗಳು ಕೂಡ ಇತ್ತು. ಇದೀಗ ಈ ಡಿವಿಡಿಯಲ್ಲಿ ಒತ್ತಕ್ಷರಗಳು ಹಾಗೂ ಕಾಗುಣಿತಗಳು ಇರುವಂತಹ ಕಲಿಕಾ ವಿಧಾನವಿದೆ ಎಂದರು.

ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿ, ವಂದಿಸಿದರು. ಈ ಸಂದರ್ಭ ಅಕಾಡಮಿಯ ಸದಸ್ಯರಾದ ಶಂಶೀರ್ ಬುಡೋಳಿ, ರೂಪೇಶ್ ಉಚ್ಚಿಲ್, ನಫೀಸತ್ ಮಿಸ್ರಿಯಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News