ಎಲ್ಲ ಧರ್ಮೀಯರನ್ನು ಗೌರವಿಸುವ ವಾತಾವರಣ ಅನುಪಮದಿಂದ ಸಾಧ್ಯ: ರವೀಂದ್ರ ಶೆಟ್ಟಿ

Update: 2021-01-28 16:03 GMT

ದೇರಳಕಟ್ಟೆ, ಜ.28: ‘ದೇಶದ ಸಂಸ್ಕೃತಿ ಮತ್ತು ಆಚರಣೆಗಳನ್ನು ಜೀವಂತವಾಗಿಡುವ ಕೆಲಸ ಮಹಿಳೆಯರಿಂದಲೇ ಸಾಧ್ಯ. ಇದಕ್ಕಾಗಿ ಅನುಪಮ ಮಹಿಳಾ ಮಾಸಿಕ ಎಲ್ಲರಿಗೂ ಉಪಯುಕ್ತವಾಗಿದೆ. ಎಲ್ಲ ಧರ್ಮಿಯರು ಪರಸ್ಪರರನ್ನು ಗೌರವಿಸುವ ವಾತಾವರಣ ಬೆಳೆಯಲು ಪೂರಕವಾದ ಕೆಲಸ ಅನುಪಮ ಮಾಡುತ್ತಿದೆ’ ಎಂದು ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದರು.

ದೇರಳಕಟ್ಟೆ ವಿದ್ಯಾರತ್ನ ಶಿಕ್ಷಣ ಸಂಸ್ಥೆಯಲ್ಲಿ ಇತ್ತೀಚೆಗೆ ನಡೆದ ಅನುಪಮ ಮಹಿಳಾ ಮಾಸಿಕ 20ನೇ ವರ್ಷದ ವಿಶೇಷಾಂಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.

ಅತಿಥಿಯಾಗಿ ವಿದ್ಯಾರತ್ನ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸೌಮ್ಯ ಆರ್. ಶೆಟ್ಟಿ, ಸಮಾಜ ಸೇವಕಿ ಸುಹಾಸಿನಿ ಬಬ್ಬುಕಟ್ಟೆ, ಅಧ್ಯಾಪಕ ರವಿಕುಮಾರ್ ಭಾಗವಹಿಸಿದ್ದರು. ಅನುಪಮದ ಪ್ರಧಾನ ಸಂಪಾದಕಿ ಶಹನಾಝ್ ಎಂ.ಅಧ್ಯಕ್ಷತೆ ವಹಿಸಿದ್ದರು. ಸುಹೈಲ ಕಿರಾಅತ್ ಪಠಿಸಿದರು. ಅನುಪಮ ಸಹ ಸಂಪಾದಕಿ ಸಬೀಹಾ ಫಾತಿಮ ಸ್ವಾಗತಿಸಿದರು. ಝರೀನಾ ವಂದಿಸಿದರು. ಸಾಜಿದಾ ಮುಬೀನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News