ತನ್ನ ಮಾಜಿ ಸಹೋದ್ಯೋಗಿ ನಾವಿಕ ಕುಮಾರ್ ವಿರುದ್ಧ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ಹೂಡಿದ ಅರ್ನಬ್‌ ಗೋಸ್ವಾಮಿ

Update: 2021-01-28 16:05 GMT
photo: national herald

ಹೊಸದಿಲ್ಲಿ,ಜ.28: ಬಾರ್ಕ್‌ ಸಿಇಒ ಪಾರ್ಥೋ ದಾಸ್‌ ಗುಪ್ತಾ ಹಾಗೂ ಅರ್ನಬ್‌ ಗೋಸ್ವಾಮಿ ನಡುವಿನ ವಾಟ್ಸ್ಯಾಪ್‌ ಚಾಟ್‌ ಅನ್ನು ಮುಂಬೈ ಪೊಲೀಸರು ತಮ್ಮ ಚಾರ್ಜ್‌ ಶೀಟ್‌ ನಲ್ಲಿ ಉಲ್ಲೇಖಿಸಿದ್ದರು. ಈ ಕುರಿತು ಟೈಮ್ಸ್‌ ನೌ ವಾಹಿನಿಯ ಕಾರ್ಯಕ್ರಮದಲ್ಲಿ ತನ್ನ ಮಾನಹಾನಿಕರ ವರದಿಯನ್ನು ಪ್ರಸಾರ ಮಾಡಿದ್ದಾರೆಂದು ರಿಪಬ್ಲಿಕ್‌ ಟಿವಿ ಮುಖ್ಯಸ್ಥ ಅರ್ನಬ್‌ ಗೋಸ್ವಾಮಿ ತಮ್ಮ ಮಾಜಿ ಸಹೋದ್ಯೋಗಿ ನಾವಿಕ ಕುಮಾರ್‌ ವಿರುದ್ಧ ಕಿಮಿನಲ್‌ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದಾರೆಂದು livelaw.in ವರದಿ ಮಾಡಿದೆ.

"ಜನವರಿ ೧೮ರಂದು ನನ್ನ ಮತ್ತು ಪಾರ್ಥೋ ದಾಸಗುಪ್ತಾ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆಯ ಕುರಿತು 9ಗಂಟೆಯ ಕಾರ್ಯಕ್ರಮದಲ್ಲಿ ಮಾನನಷ್ಟ ವರದಿಯನ್ನು ಪ್ರಸಾರ ಮಾಡಲಾಗಿದೆ. ಇದನ್ನು ಈವರೆಗೆ ಯೂಟ್ಯೂಬ್‌ ನಲ್ಲಿ 84,874 ಮಂದಿ ವೀಕ್ಷಣೆ ಮಾಡಿದ್ದು, ಲೈವ್‌ ಟೆಲಿಕಾಸ್ಟ್‌ ಅನ್ನೂ ಮಾಡಲಾಗಿದೆ ಎಂದು ತನ್ನ ದೂರಿನಲ್ಲಿ ಅರ್ನಬ್‌ ಗೋಸ್ವಾಮಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.

ಟೈಮ್ಸ್‌ ನೌ ಅನ್ನು ತೊರೆದ ಬಳಿಕ ತನ್ನ ಯಶಸ್ಸಿನ ಕುರಿತು ನಾವಿಕ ಅಸೂಯೆ ಹೊಂದಿದ್ದಾರೆಂದು ಹೇಳಿರುವ ಅರ್ನಬ್‌ " ರಿಪಬ್ಲಿಕ್‌ ಮೀಡಿಯಾ ಹಾಗೂ ನನ್ನ ಯಶಸ್ಸಿನ ಕುರಿತು ನವಿಕಾ ಕುಮಾರ್‌ ಅಸೂಯೆ ಹೊಂದಿದ್ದಾರೆ. ಮುಂಬೈ ಪೊಲೀಸರ ಚಾರ್ಜ್‌ ಶೀಟನ್ನು ದುರುಪಯೋಗಪಡಿಸಿ ಇಲ್ಲಸಲ್ಲದ ವರದಿಗಳನು ತಯಾರಿಸಲಾಗಿದೆ ಎಂದು ಬಾಂಬೆ ಹೈಕೋರ್ಟ್‌ ಗೆ ಅರ್ನಬ್‌ ಸಲ್ಲಿಸಿದ ದಾಖಲೆಯಲ್ಲಿ ಉಲ್ಲೇಖಿಸಿದ್ದಾರೆ.

ಮುಂಬೈ ಪೊಲೀಸರು ಚಾರ್ಜ್‌ ಶೀಟ್‌ ನಲ್ಲಿ ಉಲ್ಲೇಖಿಸಿರುವ ಅರ್ನಬ್‌ ವಾಟ್ಸಾಪ್‌ ಚಾಟ್‌ ನಲ್ಲಿ ನಾವಿಕ ಕುಮಾರ್‌ ಹಾಗೂ  ಅಮಿತ್‌ ಶಾರೊಂದಿಗಿನ ಟಿವಿ ಸಂದರ್ಶನದ ಕುರಿತು ಮಾತನಾಡುತ್ತಾ, ನವಿಕಾ ಕುಮಾರ್‌ ರನ್ನು ʼಕಚರಾʼ ಎಂದು ಸಂಬೋಧಿಸಿದ್ದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News