ಬ್ಯಾರಿ ನಿಖಾಃ ಹೆಲ್ಪ್ಲೈನ್‌ಗೆ ಆಯ್ಕೆ
Update: 2021-01-28 21:36 IST
ಮಂಗಳೂರು, ಜ.28: ಬ್ಯಾರಿ ನಿಖಾಃ ಹೆಲ್ಪ್ಲೈನ್ ಅಂತರಾಷ್ಟ್ರೀಯ ಸಮಿತಿಯ 2021ನೇ ಸಾಲಿನ ಅಧ್ಯಕ್ಷರಾಗಿ ಮಜೀದ್ ಬಾಹಸನಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಇರ್ಫಾನ್ ಕಲ್ಲಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಕಲಂದರ್ ರಝ್ವಿ, ಜೊತೆ ಕಾರ್ಯದರ್ಶಿಯಾಗಿ ಸುಹೈಲ್ ಕುತ್ತಾರ್, ಸಂಘಟನಾ ಕಾರ್ಯದರ್ಶಿಯಾಗಿ ನೌಶಾದ್ ಅಮ್ಮೆಂಬಳ, ಮಾಹಿತಿ ಸಂಪರ್ಕ ಕಾರ್ಯದರ್ಶಿಯಾಗಿ ಅಶ್ರಫ್ ಶಿರ್ವ, ವಿಸ್ತರಣೆ ಕಾರ್ಯದರ್ಶಿಯಾಗಿ ಆರೀಫ್ ಗೋಳಿತೊಟ್ಟು, ಸಾಂತ್ವನ ವಿಭಾಗದ ಕಾರ್ಯದರ್ಶಿಯಾಗಿ ಮಜೀದ್ ಬಿಕರ್ನಕಟ್ಟೆ, ಸಾಂತ್ವನ ವಿಭಾಗದ ಉಪ ಕಾರ್ಯದರ್ಶಿಯಾಗಿ ಶಫೀಕ್ ಉಳ್ಳಾಲ, ಮಾಧ್ಯಮ ಕಾರ್ಯದರ್ಶಿಯಾಗಿ ಫೌಸಿಲ್ ನೆಕ್ಕರೆ, ಕೋಶಾಧಿಕಾರಿಯಾಗಿ ಇಮ್ತಿಯಾಝ್ ಉಡುಪಿ, ಸಹಾಯಕ ಕೋಶಾಧಿಕಾರಿಯಾಗಿ ಅಶ್ಫಾಕ್ ಜೋಕಟ್ಟೆ ಅವರನ್ನು ನೆಮಕ ಮಾಡಲಾಗಿದೆ ಎಂದು ಸಮಿತಿಯ ಸ್ಥಾಪಕಾಧ್ಯಕ್ಷ ರಾಶ್ ಬ್ಯಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.