×
Ad

ಜ. 30 : ಮಂಗಳೂರಿನಲ್ಲಿ ರಾಜ್ಯ ಫೈಝೀಸ್ ಸಂಗಮ

Update: 2021-01-28 22:31 IST

ಮಂಗಳೂರು :  ಕರ್ನಾಟಕ ರಾಜ್ಯ ಫೈಝೀಸ್ ನೈತೃತ್ವದಲ್ಲಿ ರಾಜ್ಯ ಫೈಝಿ ಸಂಗಮ ಹಾಗು ಅಧ್ಯಯನ ಶಿಬಿರ ಜ. 30ರಂದು ಬೆಳಗ್ಗೆ 9 ರಿಂದ 12:30ರ ತನಕ ಮಂಗಳೂರಿನಲ್ಲಿ ನಡೆಯಲಿದೆ.

ಅಂದು ಬೆಳಗ್ಗೆ 9 ಗಂಟೆಗೆ ಬಂದರ್ ಮೌಲ ಮಖಾಂ ಝಿಯಾರತ್ ಗೆ ಅಸ್ಗರ್ ಫೈಝಿ ಬೋಳ್ಳೂರು ಉಸ್ತಾದ್ ನೇತೃತ್ವ ನೀಡಲಿದ್ದಾರೆ. ಫೈಝೀಸ್ ರಾಜ್ಯಾಧ್ಯಕ್ಷರಾದ ಉಸ್ಮಾನ್ ಫೈಝಿ ತೋಡಾರ್ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭ ಸಮಸ್ತ ಕೇಂದ್ರ ಸಮಿತಿ ಸದಸ್ಯ ಅಬ್ದುಲ್ಲಾ ಫೈಝಿ ಕೊಡಗು ಉದ್ಘಾಟಿಸಲಿದ್ದಾರೆ.

ಪಟ್ಟಿಕ್ಕಾಡ್ ಜಾಮಿಅ: ಪ್ರೊ. ಉಸ್ತಾದ್ ಹಂಝ ಫೈಝಿ ಹೈತಮಿ "ಮಲ್ಟಿ ಮಾರ್ಕೆಟಿಂಗ್ ವ್ಯವಹಾರ- ಮೋಸದ ಬಗ್ಗೆ ಎಚ್ಚರ" ಎಂಬ ವಿಷಯದಲ್ಲೂ ಉಸ್ತಾದ್ ಸುಲೈಮಾನ್ ಫೈಝಿ ಚುಂಗತ್ತರ ವಿಷಯ ಮಂಡನೆ ನಡೆಸಲಿದ್ದಾರೆ ಎಂದು ರಾಜ್ಯ ಫೈಝೀಸ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಫೈಝಿ ಕೊಡಗು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News