×
Ad

'ಟ್ಯಾಲೆಂಟ್‍'ನಿಂದ 35ನೇ ಬ್ಯಾಚಿನ ಉಚಿತ ಮೊಬೈಲ್ ಕೋರ್ಸ್‍ಗೆ ಅರ್ಜಿ ಆಹ್ವಾನ

Update: 2021-01-29 15:36 IST

ಮಂಗಳೂರು : ಆರ್ಥಿಕವಾಗಿ ಹಿಂದುಳಿದಿರುವ ನಿರುದ್ಯೋಗಿ ಯುವಕರಿಗೆ ಉಚಿತವಾಗಿ ನಾಲ್ಕು ತಿಂಗಳ 35ನೇ ಬ್ಯಾಚಿನ  ಮೊಬೈಲ್ ತರಬೇತಿಯನ್ನು ಆಯೋಜಿಸಿದೆ.

ಸಾಫ್ಟ್ ವೇರ್ ಮತ್ತು ಹಾರ್ಡ್‍ವೇರ್ ಬಗ್ಗೆ ತರಬೇತಿಯನ್ನು ನೀಡಲಾಗುವುದು. ಆಸಕ್ತ ಯುವಕರು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು. ತರಬೇತಿಗೆ ಹಾಜರಾಗಲು ಬಯಸುವವರು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಫೆ. 20ರ ಒಳಗೆ ಸಲ್ಲಿಸಬಹುದು. ಕನಿಷ್ಠ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಾಗಿರಬೇಕು. ಅರ್ಜಿಯೊಂದಿಗೆ 3 ಭಾವಚಿತ್ರ, ಮಾರ್ಕ್ ಕಾರ್ಡ್ ಜೆರಾಕ್ಸ್ ಮತ್ತು ರೇಶನ್/ಆಧಾರ್ ಕಾರ್ಡ್ ಜೆರಾಕ್ಸ್, ಇತ್ಯಾದಿ ದಾಖಲೆಗಳನ್ನು ಲಗತ್ತಿಸುವುದು. ಯುವಕರು ಇದರ ಸಂಪೂರ್ಣ ಪ್ರಯೋಜನ ಪಡೆಯುವಂತೆ ಸಂಸ್ಥೆಯ ಸದಸ್ಯ ಹಾಗೂ ಮೊಬೈಲ್ ಕೋರ್ಸು ಶಿಕ್ಷಕ ಅಬ್ದುಲ್ ಮಜೀದ್ ತುಂಬೆ ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ (ರಿ) ವಿಶ್ವಾಸ್ ಕ್ರೌನ್, ಕಂಕನಾಡಿ ಮಂಗಳೂರು. ದೂರವಾಣಿ: 0824-4267883, 9844573983, 7090876561

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News