ಮುಂಬರುವ ಸಿನಿಮಾದಲ್ಲಿ ಇಂದಿರಾ ಗಾಂಧಿಯ ಪಾತ್ರ ನಿರ್ವಹಿಸಲಿರುವ ಕಂಗನಾ ರಣಾವತ್

Update: 2021-01-29 11:17 GMT
photo: indianexpress

ಮುಂಬೈ,ಜ.29: ʼತಲೈವಿ' ಚಿತ್ರದಲ್ಲಿ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಪಾತ್ರ ನಿರ್ವಹಿಸಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಸಾಯಿ ಕಬೀರ್ ಅವರ ಮುಂಬರುವ ಚಲನಚಿತ್ರದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಈ ಚಲನಚಿತ್ರ ಇಂದಿರಾ ಅವರ ಜೀವನವೃತ್ತಾಂತವಲ್ಲ, ಬದಲು ತುರ್ತುಪರಿಸ್ಥಿತಿ, ಆಪರೇಷನ್ ಬ್ಲೂಸ್ಟಾರ್ ಸಹಿತ  ಭಾರತದ ರಾಜಕೀಯ ಇತಿಹಾಸದ ಕೆಲವೊಂದು ಪ್ರಮುಖ ಘಟನಾವಳಿಗಳನ್ನು ಬಿಂಬಿಸಲಿದೆ ಎಂದು ಕಂಗನಾ ಹೇಳಿಕೆ ನೀಡಿದ್ದಾರೆ. 

ಇಂದಿರಾ ಗಾಂಧಿ ಅವರ ಪಾತ್ರ ನಿರ್ವಹಿಸಲು ಎದುರು ನೋಡುತ್ತಿರುವುದಾಗಿ ಹೇಳಿದ ಕಂಗನಾ "ಭಾರತದ ರಾಜಕೀಯ ಇತಿಹಾಸದಲ್ಲಿಯೇ ಇಂದಿರಾ ಅತ್ಯಂತ ಮಹಾನ್ ನಾಯಕಿ" ಎಂದು ಅವರನ್ನು ಬಣ್ಣಿಸಿದ್ದಾರೆ.

ಈ ಚಲನಚಿತ್ರದಲ್ಲಿ ಸಂಜಯ್ ಗಾಂಧಿ, ರಾಜೀವ್ ಗಾಂಧಿ, ಮೊರಾರ್ಜಿ ದೇಸಾಯಿ, ಲಾಲ್ ಬಹಾದ್ದುರ್ ಶಾಸ್ತ್ರಿ ಮುಂತಾದ ನಾಯಕರ ಪಾತ್ರಗಳಲ್ಲಿ ಪ್ರಮುಖ ನಟರು ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News