ಹೂಡೆ ಸಾಲಿಹಾತ್ ಕಾಲೇಜಿನಲ್ಲಿ ಮತದಾನ ದಿನಾಚರಣೆ
ಉಡುಪಿ, ಜ.29: ತೋನ್ಸೆ ಹೂಡೆಯ ಸಾಲಿಹಾತ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಮತದಾನ ದಿನವನ್ನು ಆಚರಿಸಲಾಯಿತು.
ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಸಾಲಿಹಾತ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಸ್ಲಂ ಹೈಕಾಡಿ, ಮತದಾನ ಪದ್ಧತಿ ಭಾರತ ಪ್ರಜಾಪ್ರಭುತ್ವದ ವ್ಯವಸ್ಥೆಯ ಜೀವಾಳ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಮತದಾನ ಬಗ್ಗೆ ಇತರ ರಿಗೂ ಅರಿವು ಮೂಡಿಸ ಬೇಕು. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಾವು ಕೇವಲ ಮತದಾನ ಮಾಡುವುದೇ ನಮ್ಮ ಕರ್ತವ್ಯಆಗಬಾರದು. ಆಡಳಿತ ನಡೆಸುವ ಸರಕಾರಗಳ ತಪ್ಪು ಹೆಜ್ಜೆ ಇಡುವಾಗ ಎಚ್ಚರಿಸುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ವಿದ್ಯಾರ್ಥಿ ನಾಯಕಿಯರುಗಳಾದ ಸಭಾ ಮತ್ತು ಸಬೀಲ ಕೌಸರ್ ಉಪಸ್ಥಿತರಿದ್ದರು. ಕಾಲೇಜಿನ ಹಿರಿಯ ಉಪನ್ಯಾಸಕಿ ದಿವ್ಯಾ ಪೈ ಮತ ದಾನದ ಪ್ರತಿಜ್ಞಾವಿಧಿ ಬೋಧಿಸಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶು ಪಾಲೆ ಡಾ.ಸಬೀನಾ ವಹಿಸಿದ್ದರು. ಸಬೀಲಾ ಕೌಸರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರೆಹಾನಾ ವಂದಿಸಿದರು.