ಫೆ.2ರಂದು ಕ್ಯಾಂಪಸ್ ಸಂದರ್ಶನ
Update: 2021-01-29 17:27 IST
ಉಡುಪಿ, ಜ.29: ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಫೆ.2ರಂದು ಮಂಗಳೂರಿನ ಪ್ರತಿಷ್ಠಿತ ದಿಯಾ ಸಿಸ್ಟಮ್ (ಗ್ಲೋ ಟಚ್ ಟೆಕ್ನಾಲಜೀಸ್) ನೇರ ನೇಮಕಾತಿಗೆ ಕ್ಯಾಂಪಸ್ ಸಂದರ್ಶನ ನಡೆಸಲಿದೆ.
ಈಗಾಗಲೇ ಬಿಎಸ್ಸಿ, ಬಿಸಿಎ, ಎಂಸಿಎ, ಎಂಎಸ್ಸಿ, ಬಿ.ಇ(ಸಿವಿಲ್ ಮತ್ತು ಮೆಕಾನಿಕಲ್ ಹೊರತುಪಡಿಸಿ), ಬಿ.ಕಾಂ(ಕಂಪ್ಯೂಟರ್ ಅಪ್ಲಿಕೇಶನ್) ಮುಗಿಸಿ ಕೊಂಡಿರುವ ಅಭ್ಯರ್ಥಿಗಳು ಪೂರ್ವಾಹ್ನ 9.30ಕ್ಕೆ ಕಾಲೇಜಿನ ಸಭಾಂಗಣದಲ್ಲಿ ಸಂದರ್ಶನಕ್ಕೆ ಹಾಜರಾಗ ಬಹುದು. ಅಭ್ಯರ್ಥಿಗಳು ಆಧಾರ್ ಕಾರ್ಡ್, ಪದವಿ ಪ್ರಮಾಣ ಪತ್ರದ ಮೂಲಕ ಅಂಕಪಟ್ಟಿಯೊಂದಿಗೆ ಸಂದರ್ಶನಕ್ಕೆ ಹಾಜರಾಗ ಬಹುದು. ಹೆಚ್ಚಿನ ಮಾಹಿತಿಗಾಗಿ 9448796357 ಸಂಪರ್ಕಿಸಬೇಕು ಎಂದು ಪ್ರಾಂುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.