×
Ad

ಮೂಡಬಿದಿರೆಗೆ ರೈತ ಕಾರ್ಮಿಕ ಜಾಥಾ

Update: 2021-01-29 20:20 IST

ಮೂಡುಬಿದಿರೆ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಸಂಬಂಧಿ ಕಾಯ್ದೆಗಳು ಹಾಗೂ ಕಾರ್ಮಿಕ ಸಂಹಿತೆಯ ವಿರುದ್ಧ ಸಿಐಟಿಯು ಆರಂಭಿಸಿದ ರೈತ ಕಾರ್ಮಿಕ ಜಾಥವು ಶಿವಮೊಗ್ಗದಿಂದ ಶುಕ್ರವಾರ ಮೂಡಬಿದಿರೆಗೆ ಆಗಮಿಸಿತು.

ಸ್ವರಾಜ್ಯ ಮೈದಾನದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಮೂರು ಕೃಷಿ ಮಸೂದೆಗಳು ಕೃಷಿಕರಿಗೆ ಮಾತ್ರವಲ್ಲ ಇತರರಿಗೂ ತೊಂದರೆಯಾಗಲಿದೆ. ಅಪಾರ ಸ್ವಉದ್ಯೋಗಾವಕಾಶವನ್ನು ಕಲ್ಪಿಸಿರುವ ಚಿಲ್ಲರೆ ವ್ಯಾಪಾರ ಕ್ಷೇತ್ರವು ಕಾರ್ಪೋರೇಟ್ ಕಂಪೆನಿಗಳ ದಾಳಿಗೆ ಸಿಲುಕಿನಾಮಾವಶೇಷವಾಗಲಿವೆ. 23 ಅಗತ್ಯ ವಸ್ತುಗಳ ದಾಸ್ತಾನು ಮಿತಿಯನ್ನು ತೆಗೆದು ಹಾಕಿರುವುದರಿಂದ ಕಾರ್ಪೋರೇಟ್ ಕಂಪೆನಿಗಳು ರೈತರ ಬೆಲೆಯನ್ನು ಜುಜುಬಿ ಬೆಲೆಗೆ ಖರೀದಿಸಿ ದಾಸ್ತಾನು ಇರಿಸಿ  ಲಾಭ ಮಾಡಿಕೊಳ್ಳಲಿದ್ದು ರೈತರು ಸಂಕಷ್ಟ ಎದುರಿಸಬಹುದು ಎಂದರು.

ಜಾಥಾದ ಸಂಚಾಲಕ ವೆಂಕಟೇಶ್ ಕೋಣಿ ಕೃಷಿ ಕಾಯ್ದೆಗಳಿಂದಾಗುವ ತೊಂದರೆಗಳ ಕುರಿತು ಮಾಹಿತಿ ನೀಡಿದರು. ಸಿಐಟಿ ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ, ಪ್ರಾಂತ ರೈತ ಸಂಘದ ಉಪಾಧ್ಯಕ್ಷ ವಾಸುದೇವ್ ಉಚ್ಚಿಲ ಉಪಸ್ಥಿತರಿದ್ದರು, ಮೂಡುಬಿದಿರೆ ಘಟಕದ ಅಧ್ಯಕ್ಷೆ ರಮಣಿ ಅಧ್ಯಕ್ಷತೆ ವಹಿಸಿದ್ದರು, ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಯಾದವ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News