×
Ad

ಜ. 31 'ಸ್ವರ ಕುಡ್ಲ' ಸಂಗೀತ ಸ್ಪರ್ಧೆ; ಫೆ.10 ವಾರ್ಷಿಕೋತ್ಸವ

Update: 2021-01-29 22:52 IST

ಮಂಗಳೂರು : ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ದ.ಕ., ಉಡುಪಿ ಜಿಲ್ಲೆ ಗಾಯಕರು, ಹಿಮ್ಮೇಳ ವಾದಕರು ಸೇರಿ ಮುನ್ನೂರಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡ ಕಲಾ ಸಂಸ್ಥೆ, ಸಂಗೀತ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಕಳೆದ 12 ವರ್ಷಗಳಿಂದ ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆ, ಅಶಕ್ತರಿಗೆ ಸಹಾಯ, ವಿದ್ಯಾನಿಧಿ, ಸಾಧಕರಿಗೆ ಸನ್ಮಾನ, ಯುವಪ್ರತಿಭೆಗೆ ಪ್ರೋತ್ಸಾಹದಂತಹ ಧೈಯಗಳನ್ನಿರಿಸಿಕೊಂಡು ಕೆಲಸ ಮಾಡಿ ಕೊಂಡು ಬಂದಿದೆ. ಕೋವಿಡ್ 19 ಸಂದರ್ಭದಲ್ಲೂ ಹೆಚ್ಚಿನ ಅಶಕ್ತ ಸಂಗೀತ ಕಲಾವಿದರಿಗೆ ಆಹಾರ ಕಿಟ್‌ಗಳು, ನಗದು ಸಹಾಯ ಒಕ್ಕೂಟದ ವತಿಯಿಂದ ಮಾಡಲಾಗಿದೆ.

ಇದೀಗ 13ನೇ ವಾರ್ಷಿಕೋತ್ಸವದ ಅಂಗವಾಗಿ 'ಸ್ವರ ಕುಡ್ಲ' ಸಂಗೀತ ಸ್ಪರ್ಧೆಯನ್ನು ಜ. 31ರಂದು ಬೆಳಗ್ಗೆ 9.30ರಿಂದ ನಗರದ ಕಾರ್‌ಸ್ಪೀಟ್ ಬಿ.ಇ.ಎಂ. ಸ್ಕೂಲ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಈ ಕಾರ್ಯಕ್ರಮವನ್ನು ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ರಾಷ್ಟ್ರೀಯ ಘಟಕ ಇದರ ಮಾಜಿ ರಾಷ್ಟ್ರೀಯ ಉಪಾಧ್ಯಕ್ಷರಾದ  ವಿಜಯ ವಿಷ್ಣು ಮಯ್ಯ ಇವರು ಉದ್ಘಾಟಿಸಲಿದ್ದು, ಅತಿಥಿಗಳಾಗಿ ಬಂಟ್ವಾಳ ಡಿವೈಎಸ್.ಪಿ. ವೆಲಂಟೈನ್ ಡಿಸೋಜ, ಬಿ.ಇ.ಎಂ. ಎಜ್ಯುಕೇಶನ್ ಇನ್‌ಸ್ಟಿಟ್ಯೂಶನ್‌ನ ಸಂಚಾಲಕರಾದ ರೋಹನ್ ಶಿರಿ, ಬರ್ಕೆ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರು ಹಾಗೂ ಖ್ಯಾತ ಜಾನಪದ ಕಲಾವಿದರಾದ ಜ್ಯೋರ್ತಿಲಿಂಗ ಹೊನಕಟ್ಟೆ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯರುಗಳಾದ ಝೀನತ್ ಸಂಶುದ್ದೀನ್ ಮತ್ತು ಜಯಶ್ರೀ ಕುಡ್ವ ಭಾಗವಹಿಸಲಿದ್ದಾರೆ.

ಫೆ 10 ಪುರಭವನದಲ್ಲಿ ವಾರ್ಷಿಕೋತ್ಸವ :

ಸ್ವರ ಕುಗ್ಧ ಸ್ಪಧೆರ್ಯ ಸೆಮಿಪೈನಲ್ ಹಾಗೂ ಗ್ರಾಂಡ್ ಫಿನಾಲೆ ಕಾರ್ಯಕ್ರಮವನ್ನು ಮಂಗಳೂರು ಪುರಭವನದಲ್ಲಿ ಫೆ.10 ರಂದು ಬೆಳಿಗ್ಗೆ 9.30ರಿಂದ ಆಯೋಜಿಸಲಾಗಿದ್ದು, ಖ್ಯಾತ ಸಿತಾರ್ ವಾದಕರಾದ ಉಸ್ತಾದ್ ರಫೀಖ್ ಖಾನ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮಂಗಳೂರು ನಗರ ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎಂ. ಎ. ನಟರಾಜ್, ಸಿಂಪೆನಿ ಮ್ಯೂಸಿಕ್ ಇನ್‌ಸ್ಟ್ರುಮೆಂಟ್‌ನ ಮಾಲಕರಾದ ಲೋಯ್ ನೊರೊನ್ಹ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಅಬ್ದುಲ್ ಲತೀಫ್ ಕಂದಕ್ ಹಾಗು ಇತರರು ಉಪಸ್ಥಿತರಿರುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News