ವಿಶ್ವಸಂಸ್ಥೆಯ ಸ್ಥಾನಗಳಿಗೆ ಭಾರತೀಯ ಅಮೆರಿಕನ್ ಮಹಿಳೆಯರ ನೇಮಕ

Update: 2021-01-29 18:06 GMT

ವಾಶಿಂಗ್ಟನ್, ಜ. 29: ವಿಶ್ವಸಂಸ್ಥೆಯಲ್ಲಿರುವ ಅಮೆರಿಕ ನಿಯೋಗದ ಎರಡು ಮಹತ್ವದ ರಾಜತಾಂತ್ರಿಕ ಹುದ್ದೆಗಳಿಗೆ ಜೋ ಬೈಡನ್ ಸರಕಾರವು ಇಬ್ಬರು ಭಾರತೀಯ- ಅಮೆರಿಕನ್ ಪರಿಣತರನ್ನು ನೇಮಿಸಿದೆ.

 ವಿಶ್ವಸಂಸ್ಥೆಗೆ ಅಮೆರಿಕ ರಾಯಭಾರಿಯ ಹಿರಿಯ ನೀತಿ ಸಲಹೆಗಾರ್ತಿಯಾಗಿ ಸೋಹಿನಿ ಚಟರ್ಜಿ ಹಾಗೂ ಅಮೆರಿಕ ನಿಯೋಗದ ನೀತಿ ಸಲಹೆಗಾರ್ತಿಯಾಗಿ ಅದಿತಿ ಗೋರೂರ್‌ರನ್ನು ನೇಮಿಸಲಾಗಿದೆ ಎಂದು ಅಧಿಕೃತ ಹೇಳಿಕೆಯೊಂದು ತಿಳಿಸಿದೆ.

ಜಾಗತಿಕ ಬೆಳವಣಿಗೆ, ಸಂಘರ್ಷ ಮತ್ತು ಸಾಮೂಹಿಕ ದೌರ್ಜನ್ಯಗಳ ಕುರಿತ ಪರಿಣಿತೆಯಾಗಿರುವ ಸೋಹಿನಿ, ಇತ್ತೀಚಿನವರೆಗೂ ಕೊಲಂಬಿಯ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಇಂಟರ್‌ನ್ಯಾಶನಲ್ ಆ್ಯಂಡ್ ಪಬ್ಲಿಕ್ ಅಫೇರ್ಸ್‌ನಲ್ಲಿ ಪ್ರೊಫೆಸರ್ ಆಗಿದ್ದರು.

ವಿಶ್ವಸಂಸ್ಥೆಯ ಶಾಂತಿಪಾಲನಾ ಯೋಜನೆಯ ಪರಿಣಿತೆಯಾಗಿರುವ ಅದಿತಿ, ಇತ್ತೀಚಿನವರೆಗೂ ಸ್ಟಿಮ್ಸನ್ ಸೆಂಟರ್‌ನಲ್ಲಿ, ಸಂಘರ್ಷಪೀಡಿತ ಪ್ರದೇಶಗಳಲ್ಲಿರುವ ನಾಗರಿಕರನ್ನು ರಕ್ಷಿಸುವ ಕಾರ್ಯಕ್ರಮದ ಸೀನಿಯರ್ ಫೆಲೋ ಹಾಗೂ ನಿರ್ದೇಶಕಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News