ಫೆ.6ರಿಂದ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ : ಕರ್ನಾಟಕ ತಂಡದ ತರಬೇತುದಾರರಾಗಿ ಕಡಬದ ಅಬ್ದುಲ್ ಖಾದರ್
Update: 2021-01-29 23:40 IST
ಕಡಬ: ಫೆ.6ರಿಂದ 10ರ ವರೆಗೆ ನಡೆಯಲಿರುವ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸುವ ಕರ್ನಾಟಕ ತಂಡದ ತರಬೇತುದಾರರಾಗಿ ಕಡಬದ ಅಬ್ದುಲ್ ಖಾದರ್ (ಕಲಂದರ್) ಅವರು ಆಯ್ಕೆಯಾಗಿದ್ದಾರೆ.
ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿಯ ಪದಕವನ್ನು ಜಯಿಸಿ 36ನೇ ರಾಷ್ಟ್ರೀಯ ಜ್ಯೂನಿಯರ್ ವಿಭಾಗದ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಲಿರುವ ಪುತ್ತೂರಿನ ವಿವೇಕಾನಂದ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಚರಿತ್ ಪ್ರಕಾಶ್ ಇವರ ತರಬೇತುದಾರರಾಗಿ ಅಬ್ದುಲ್ ಖಾದರ್ ಕಡಬ ಇವರು ಭಾಗವಹಿಸಲಿದ್ದಾರೆ.
ಇವರು ಖ್ಯಾತ ಕಬಡ್ಡಿ ತರಬೇತುದಾರ ಹಾಗೂ ತೀರ್ಪುಗಾರರಾಗಿದ್ದು, ಇದೀಗ ಕರ್ನಾಟಕ ತಂಡದ ತರಬೇತುದಾರರಾಗಿ ಆಯ್ಕೆಯಾಗಿ ಫೆ.6 ರಂದು ಅಸ್ಸಾಂನ ಗುವಾಹಟಿಗೆ ತೆರಳಲಿದ್ದಾರೆ.