×
Ad

​ಪಿ.ಎ. ಕಾಲೇಜಿನಲ್ಲಿ ಪದವಿ ದಿನಾಚರಣೆ

Update: 2021-01-30 18:23 IST

ಕೊಣಾಜೆ : ಅಧ್ಯಯನ ಎಂಬುದು ಒಂದು ನಿರಂತರವಾದ ಒಂದು ಪ್ರಕ್ರಿಯೆಯಾಗಿದೆ. ನಿರಂತರ ಅಧ್ಯಯನ ಮತ್ತು ಕಠಿಣ ಪರಿಶ್ರಮ ನಮ್ಮ ಜೀವನದ ಯಶಸ್ಸಿನ ಕೀಲಿಕೈ ಎಂದು ಇನ್ಫೋಸಿಸ್ ನ ಮಂಗಳೂರು ಅಭಿವೃದ್ಧಿ ವಿಭಾಗದ ಉಪಾಧ್ಯಕ್ಷರಾದ ವಾಸುದೇವ ಕಾಮತ್ ಅವರು ಹೇಳಿದರು.

ಅವರು ಶನಿವಾರ ಪಿ.ಎ.ಕಾಲೇಜಿನ ಎಂಜಿನಿಯರಿಂಗ್ ಕಾಲೇಜಿನ ಪದವಿ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕಲಿಯುವಿಕೆಗೆ ಅಂತ್ಯ ಎಂಬುದಿಲ್ಲ. ಅದೊಂದು ಮುಗಿಯದ ಜ್ಞಾನದ ಪಯಣವಾಗಿದೆ. ಇಂದಿನ ಆಧುನಿಕ  ವಿಜ್ಞಾನ ಹಾಗೂ ತಂತ್ರಜ್ಞಾನದ  ಕಾಲಘಟ್ಟದಲ್ಲಿ ಅವಕಾಶಗಳನ್ನು ಬಳಸಿಕೊಂಡು ಮುನ್ನಡೆಯುವ ಕೌಸಲ್ಯ ನಮ್ಮಲ್ಲಿರಬೇಕು ಎಂದು ಹೇಳಿದರು.
ಪದವಿ ದಿನಾಚರಣೆಯ ಭಾಷಣವನ್ನು ಮಾಡಿದ ಪಿ.ರ.ಎಂಜಿನಿಯರಿಂಗ್ ಕಾಲೇಜಿನ ಮುಖ್ಯಸ್ಥರಾದ ಡಾ.ಪಿ.ಎ.ಇಬ್ರಾಹಿಂ ಹಾಜಿ ಅವರು,  ಪ್ರಸ್ತುತ ಕಾಲಘಟ್ಟದಲ್ಲಿ ಎಲ್ಲಾ ಕ್ಷೇತ್ರದಲ್ಲಿಯೂ ಸವಾಲುಗಳು ಎದುರಾಗಿವೆ. ಇದನ್ನೆಲ್ಲಾ ನಮ್ಮ ಪರಿಶ್ರಮ ಹಾಗೂ ಜ್ಞಾನ ಕೌಶಲ್ಯದಿಂದ‌ ಮೆಟ್ಟಿ ನಿಂತು ಸಾಧನೆ ಮಾಡಬೇಕಿದೆ ಎಂದರು.

ಶಿಕ್ಷಣದೊಂದಿಗೆ ಮಾನವೀಯ ಮೌಲ್ಯ ಬೆಳೆಸಿಕೊಳ್ಳುವ ಮನೋಭಾವ ನಮ್ಮದಾಗಬೇಕು. ಶೈಕ್ಷಣಿಕ ಸಾಧನೆಯೊಂದಿಗೆ ಸಮಾಜಕ್ಕೂ ನಾವು ಕೊಡುಗೆ ನೀಡುವಂತಾಗಬೇಕು ಎಂದು ಹೇಳಿದರು.

ಐಟಿ, ಇಂಜಿನಿಯರಿಂಗ್ , ಮೆಡಿಕಲ್ ಶಿಕ್ಷಣ ಕ್ಕೆ ಬಹಳಷ್ಟು ಬೇಡಿಕೆ ಇದೆ. ಅದೇ ರೀತಿ ಪಿ.ಎ. ಕಾಲೇಜ್ ನಲ್ಲಿ ಇಂಜಿನಿಯರ್ ಶಿಕ್ಷಣ ಕ್ಕೆ ಜಾಸ್ತಿ ಉತ್ತೇಜನ ನೀಡಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ  ಬೆಂಗಳೂರು ಪ್ರೆಸಿಡೆನ್ಸಿ ಸ್ಕೂಲ್ ಇಂಜಿನಿಯರಿಂಗ್ ವಿವಿಯ ಡೀನ್ ಡಾ.ಅಬ್ದುಲ್ ಶರೀಫ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಇಸ್ಮಾಯಿಲ್ ಶಾಫಿ,  ಹಣಕಾಸು ವಿಭಾಗದ ನಿರ್ದೇಶಕ ಅಹ್ಮದ್ ಕುಟ್ಟಿ, ಮೆಕಾನಿಕಲ್ ಇಂಜಿನಿಯರಿಂಗ್ ‌ಮುಖ್ಯಸ್ಥ ಡಾ.ರಮೀಸ್ ಎಂ.ಕೆ, ಎಂಬಿಎ ವಿಭಾಗ ನಿರ್ದೇಶಕ ಡಾ.ಸಯ್ಯದ್ ಅಮೀನ್,
ಬಯೋಟೆಕ್ನಾಲಜಿ ವಿಭಾಗದ ಡಾ.ಕೃಷ್ಣಪ್ರಸಾದ್, ಕಂಪ್ಯೂಟರ್ ಸಯನ್ಸ್ ವಿಭಾಗದ ಡಾ.ಶರ್ಮಿಳಾ ಕುಮಾರಿ, ಸಿವಿಲ್  ಎಂಜಿನಿಯರಿಂಗ್ ವಿಭಾಗದ ಡಾ.ಪಾಲಾಕ್ಷಪ್ಪ, ಪ್ರೊ.ಮೊಹಮ್ಮದ್ ಹುಸೈನ್, ಪ್ರೊ.ಜಾನ್ ವಾಲ್ಡರ್, ಪ್ರೊ.ಅಬ್ದುಲ್ ಮಜೀದ್, ಪ್ರೊ. ಝಿಶ್ಹಾನ್ ಅಬ್ದುಲ್ಲಾ ಮೊದಲಾದವರು ಉಪಸ್ಥಿತರಿದ್ದರು.

ಪಿಎ ಎಜ್ಯುಕೇಶನಲ್ ಟ್ರಸ್ಟ್ ನ ಕಾರ್ಯಾಕಾರಿ ನಿರ್ದೇಶಕ ಅಬ್ದುಲ್ಲಾ ಇಬ್ರಾಹಿಂ ಅವರು  ಅತಿಥಿ ಗಳನ್ನು ಸ್ವಾಗತಿಸಿದರು. ಉಪಪ್ರಾಂಶುಪಾಲ ಡಾ.ರಮೀಝ್ ಎಂ.ಕೆ. ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News