ಸಾಹಿತಿ, ನಟ ತಾರಾನಾಥ ಬೋಳಾರ್ ನಿಧನ
ಮಂಗಳೂರು, ಜ.30: ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ತಾರನಾಥ ಬೋಳಾರ್ (65) ಅವರು ಮೈಸೂರಿನ ಅವರ ಪುತ್ರಿಯ ನಿವಾಸದಲ್ಲಿ ಶುಕ್ರವಾರ ನಿಧನರಾಗಿದ್ದಾರೆ.
ಅವರು ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯ ಪ್ರಧಾನ ಸಂಚಾಲಕ ಎಂ.ಜಿ.ಆರ್ ಅರಸ್, ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ನ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ, ಕಾರ್ಯದರ್ಶಿ ಸುಲಾಯ ಒಡ್ಡಂಬೆಟ್ಟು, ಮಾಜಿ ಜಿಲ್ಲಾಧ್ಯಕ್ಷ ಕವಿ ಗಣೇಶ್ ಪ್ರಸಾದ್ ಪಾಂಡೇಲು, ಮಂಗಳೂರು ತಾಲೂಕು ಚುಸಾಪದ ಅಧ್ಯಕ್ಷ ಕಾ.ವೀ.ಕೃಷ್ಣದಾಸ್, ತಾಲೂಕು ಚುಸಾಪದ ಮಾಜಿ ಅಧ್ಯಕ್ಷರುಗಳಾದ ರೇಮಂಡ್ ಡಿಕುನಾ, ಡಾ.ಸುರೇಶ್ ನೆಗಳಗುಳಿ, ಸುಬ್ರಾಯ ಭಟ್, ಪ್ರೊ. ಪಿ. ಕೃಷ್ಣಮೂರ್ತಿ, ಅರೆಹೊಳೆ ಸದಾಶಿವ ರಾವ್, ಮಹೇಶ್ ಆರ್ ನಾಯಕ್, ಯಶವಂತ ಡಿ ಎಸ್, ಮಾಲತಿ ಶೆಟ್ಟಿ ಮಾಣೂರು, ತಾಲೂಕು ಚುಸಾಪ ಉಪಾಧ್ಯಕ್ಷೆ ಡಾ. ಅರುಣಾ ನಾಗರಾಜ್, ಕಾರ್ಯದರ್ಶಿ ವಿಜಯಲಕ್ಷ್ಮೀ ಕಟೀಲು, ಜತೆ ಕಾರ್ಯದರ್ಶಿ ವೆಂಕಟೇಶ್ ಗಟ್ಟಿ, ಕೋಶಾಧಿಕಾರಿ ಲತೀಶ್ ಎಂ ಸಂಕೊಳಿಗೆ, ಮೊದಲಾದ ಗಣ್ಯರು ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.