×
Ad

ರಾಜ್ಯದಲ್ಲಿ ಐದು ಭಾರೀ ವಾಹನ ಚಾಲನಾ ತರಬೇತಿ ಕೇಂದ್ರ ಆರಂಭ : ಲಕ್ಷ್ಮಣ ಸಂಗಪ್ಪ ಸವದಿ

Update: 2021-01-30 19:27 IST

ಮಂಗಳೂರು, ಜ.30: ರಾಜ್ಯದಲ್ಲಿ  ಒಟ್ಟು ಐದು ಭಾರೀ ವಾಹನ ಚಾಲನಾ ತರಬೇತಿ ಕೇಂದ್ರ ಆರಂಭಿಸಲು ತೀರ್ಮಾನಿಸಲಾ ಗಿದೆ. ಈ  ಪೈಕಿ ದ.ಕ ಜಿಲ್ಲೆಯ ಪಜೀರು  ಕೇಂದ್ರ 15  ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ಪೂರ್ಣ ಗೊಂಡು ಇಂದು ಉದ್ಘಾಟನೆಯಾಗಿದೆ ಎಂದು ಉಪ ಮುಖ್ಯ ಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸಂಗಪ್ಪ ಸವದಿ ತಿಳಿಸಿದ್ದಾರೆ.

ಮಂಗಳೂರು ತಾಲೂಕಿನ ಪಜೀರು ಕಂಬ್ಲಪದವು ಕೆಐಎಡಿಬಿ ಕಂಬ್ಲಪದವು ಹತ್ತಿರ ಭಾರಿ ವಾಹನ ಚಾಲನಾ ತರಬೇತಿ ಕೇಂದ್ರ ವನ್ನು ಅವರು ಇಂದು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮುಂದಿನ ಹಂತದಲ್ಲಿ ಇನ್ನೂ ನಾಲ್ಕು ಘನ ವಾಹನ ಚಾಲನಾ ತರಬೇತಿ ಕೇಂದ್ರ ಶೀಘ್ರದ ಲ್ಲಿ ಆರಂಭಿಸಲಾಗುವುದು. ಮುಂದಿನ ತಿಂಗಳು ಹೊಳಲ್ಕೆರೆಯಲ್ಲಿ ಭಾರಿ ವಾಹನ ಚಾಲನ ತರಬೇತಿ ಉದ್ಘಾಟನೆ ಗೊಳ್ಳಲಿದೆ. ರಾಜ್ಯದಲ್ಲಿ  ಹೆಚ್ಚು ಹೆಚ್ಚು ಅಪಾಘಾತ ಮುಕ್ತ ವಲಯಗಳನ್ನಾಗಿ ಪರಿವರ್ತಿಸುವುದು. ಅಪಘಾತ ರಹಿರ ಚಾಲಕರನ್ನು ಪ್ರೋತ್ಸಾಹಿಸುವುದು ಸರಕಾರದ ಗುರಿಯಾಗಿದೆ. ಈ ನಿಟ್ಟಿನಲ್ಲಿ ಅಪಘಾತ ರಹಿರ ಚಾಲಕರಿಗೆ ಪ್ರತಿವರ್ಷ ಚಿನ್ನ ಮತ್ತು  ಬೆಳ್ಳಿಯ ಪದಕಗಳನ್ನು ನೀಡಿ ಪುರಸ್ಕರಿಸಲಾಗುತ್ತಿದೆ ಎಂದು ಸವದಿ ತಿಳಿಸಿದ್ದಾರೆ.

ಅಪಘಾತ ಮುಕ್ತ ಜಿಲ್ಲೆಯಾಗಿ ದ.ಕ,ಉಡುಪಿ ಮೂಡಿಬರಲಿ ಎಂದು ಸಚಿವ ಸವದಿ ತಿಳಿಸಿದ್ದಾರೆ. ಭಾರೀ ವಾಹನ ಚಾಲಕರಿಗೆ ಸಮರ್ಪಕ ಕಡ್ಡಾಯ ತರಬೇತಿ ಅಗತ್ಯವಿದೆ.ದೇಶದಲ್ಲಿ  ಪ್ರತಿ ವರ್ಷ ಒಂದೂವರೆ ಲಕ್ಷ ಜನ ಅಪಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಸೂಕ್ತವಾದ ವಾಹನ ಚಾಲನಾ ತರಬೇತಿ ಯ ಜೊತೆ ಚಾಲಕರು ಎಚ್ಚರಿಕೆಯಿಂದ ವಾಹನ ಚಲಾಯಿಸುವುದು ಮುಖ್ಯ. ಇಲ್ಲದೆ ಹೋದರೆ ಸಾಕಷ್ಟು ಅಮಾಯಕರ ಅಮೂಲ್ಯ ಜೀವ ರಸ್ತೆ ಅಪಘಾತದಲ್ಲಿ ಅಂತ್ಯಗೊಳ್ಳುತ್ತದೆ. ಸಾಕಷ್ಟು ಕುಟುಂಬ ಗಳು ತಮ್ಮವರ ಅಗಲಿಕೆಯ ನೋವನ್ನು ಅನುಭವಿಸಬೇಕಾಗುತ್ತದೆ. ಇಂತಹ ಸಂತ್ರಸ್ತರಲ್ಲಿ ನಾನು ಸೇರಿದ್ದೇನೆ. ನನ್ನ ಚಿಕ್ಕಪ್ಪ ನ ಮಗನೊಬ್ಬನನ್ನು ರಸ್ತೆ ಅಪಘಾತದಲ್ಲಿ ಕಳೆದು ಕೊಂಡಿದ್ದೇನೆ. ಕಳೆದ ಕೆಲವು ವಾರಗಳ ಹಿಂದೆ  ನನ್ನ ವಾಹನ ಅಪಘಾತ ಕ್ಕೀಡಾಗಿದ್ದರೂ ದೇವರ ದಯೆಯಿಂದ ಪಾರಾಗಿದ್ದೇನೆ ಎಂದು ಸಚಿವ ಸವದಿ ತಮ್ಮ ಅನುಭವ ತಿಳಿಸಿದ್ದಾರೆ. ಪಜೀರಿನಲ್ಲಿ ಲಘು ವಾಹನ ಚಾಲನಾ ತರಬೇತಿ ಕೇಂದ್ರ ವನ್ನು ಸ್ಥಳೀಯರ ಬೇಡಿಕೆಯ ಹಿನ್ನೆಲೆಯಲ್ಲಿ ಆರಂಭಿಸುವು ದಾಗಿ ಇದೇ ಸಂದರ್ಭದಲ್ಲಿ ಸಚಿವ ಸವದಿ  ಭರವಸೆ ನೀಡಿದರು.

ಸಮಾರಂಭದ ಅಧ್ಯಕ್ಷ ತೆಯನ್ನು ವಹಿಸಿದ್ದ ಮಾಜಿ ಸಚಿವ, ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಯು.ಟಿ.ಖಾದರ್ ಮಾತನಾಡುತ್ತಾ, ಕಾಂಗ್ರೆಸ್ ನೇತೃತ್ವದ ಸರಕಾರದ ಸಂದರ್ಭದಲ್ಲಿ ಶಿಲಾನ್ಯಾಸ ನಡೆದಿದೆ. ಶೀಘ್ರವಾಗಿ ಕಾಮಗಾರಿ ಪೂರ್ಣ ಗೊಂಡ ಬರುವುದಕ್ಕೆ ಸಚಿವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ಇದೇ ಪ್ರದೇಶದಲ್ಲಿ ಲಘು ವಾಹನ ಚಾಲನಾ ತರಬೇತಿ ಕೇಂದ್ರ ಆರಂಭಿಸಬೇಕಾದ ಅಗತ್ಯವಿದೆ ಎಂದು ಖಾದರ್ ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ, ರಾಜ್ಯ ಮುಜರಾಯಿ, ಹಿಂದುಳಿದ ವರ್ಗಗಳ ಕಲ್ಯಾಣ  ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡುತ್ತಾ, ಸುಮಾರು 15 ಕೋಟಿ ರೂ. ವೆಚ್ಚದ 10 ಎಕ್ರೆ ವಿಸ್ತೀರ್ಣ ದಲ್ಲಿ ನಿರ್ಮಾಣ ಗೊಂಡ ಘನ ವಾಹನ ವಾಹನ ತರಬೇತಿ ಕೇಂದ್ರವನ್ನು ಲೋಕಾರ್ಪಣೆ ಮಾಡಲು ಕಾರಣರಾದ ಲಕ್ಷ್ಮಣ ಸವದಿಯವರಿಗೆ ಕ್ರತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಮೀನುಗಾರಿಕೆ ,ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಅಂಗಾರ. ಎಸ್,ರಾಜ್ಯ ಸಾರಗೆ ಮತ್ತು ರಸ್ತೆ ಸುರಕ್ಷತಾ ಇಲಾಖೆಯ ಆಯುಕ್ತ ಎನ್ .ಶಿವಕುಮಾರ, ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ. ಅಧ್ಯಕ್ಷ ಸಂತೋಷ್ ಕುಮಾರ್ ಬೊಳಿಯಾರ್, ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕರ್ನಾಟಕ ರಾಜ್ಯ ಅಲೆ ಮಾರಿಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ, ಜಿ.ಪಂ.ಅಧ್ಯಕ್ಷ ಮೀನಾಕ್ಷಿ ಶಾಂತಿಗೋಡು, ಸದಸ್ಯೆ ಮಮತಾ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಅಪರ ಸಾರಿಗೆ ಆಯುಕ್ತ ನರೇಂದ್ರ ಹೋಳ್ಕರ್ ಸ್ವಾಗತಿಸಿ, ಜಂಟಿ ಸಾರಿಗೆ ಆಯುಕ್ತ ಎನ್.ಜಿ.ಗಾಯತ್ರಿ ದೇವಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News