×
Ad

ಗಾಂಧಿಜಿ ನಾಯಕತ್ವ ಸಮಾಜಕ್ಕೆ ಎಂದೆಂದಿಗೂ ಪ್ರಸ್ತುತ : ಸೊರಕೆ

Update: 2021-01-30 19:47 IST

ಉಡುಪಿ, ಜ.30: ಮಹಾತ್ಮಾ ಗಾಂಧಿಜಿಯವರ ತತ್ವಾದರ್ಶಗಳು ಮತ್ತು ನಾಯಕತ್ವ ಸಮಾಜಕ್ಕೆ ಎಂದೆಂದಿಗೂ ಪ್ರಸ್ತುತವಾಗಿದೆ. ತನ್ನ ಸರಳತೆ, ಸತ್ಯ ನಿಷ್ಠೆ, ಅಹಿಂಸಾ ತತ್ವ ಮತ್ತು ಪ್ರಾಮಾಣಿಕತೆಯಿಂದ ಇಂದು ಇಡೀ ವಿಶ್ವಕ್ಕೆ ಮಾದರಿ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.

ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಘಟನೆ ವತಿಯಿಂದ ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಶನಿವಾರ ಆಯೋಜಿಸಲಾದ ಹುತಾತ್ಮ ದಿವಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲೆಯಲ್ಲಿ ಕೊರಗ ಸಮುದಾಯದಲ್ಲಿ ಸಾಧನೆ ತೋರಿದ ಸುಕ್ರ ಕೊರಗ, ವಿನುತ, ಬಾಬು ಕೊರಗ ಮತ್ತು ಶ್ವೇತಾ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ 70 ಕೊರಗ ಕುಟುಂಬಗಳಿಗೆ ಮನೆಗೆ ಅಗತ್ಯವಿರುವ ಪರಿಕರಗಳನ್ನು ವಿತರಿಸಲಾಯಿತು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕರ್ನೆಲಿಯೊ, ನಾಯಕರಾದ ನರಸಿಂಹ ಮೂರ್ತಿ, ಅಣ್ಣಯ್ಯ ಸೇರಿಗಾರ್, ಕುಶಲ ಶೆಟ್ಟಿ, ಭಾಸ್ಕರ್ ರಾವ್ ಕಿದಿಯೂರು, ಕಿಶನ್ ಹೆಗ್ಡೆ ಕೊಳ್ಕೆಬೈಲು, ಸರಳಾ ಕಾಂಚನ್, ಗೀತಾ ವಾಗ್ಳೆ, ಬಾಲಕೃಷ್ಣ ಪೂಜಾರಿ, ಜನಾರ್ಧನ ಭಂಡಾರ್ಕರ್, ನಾಗೇಶ್ ಉದ್ಯಾವರ, ಹರೀಶ್ ಕಿಣಿ, ಮೇರಿ ಡಿಸೋಜಾ, ಪ್ರಮೀಳಾ ಜತ್ತನ್ನ, ಶಾಂತಿ ಪಿರೇರಾ, ಲೂಯಿಸ್ ಲೋಬೊ, ಕಿಶೋರ್ ಎರ್ಮಾಳ್, ಜ್ಯೋತಿ ಮೆನನ್, ಮೀನಾಕ್ಷಿ ಮಾಧವ, ಸರಸು ಬಂಗೇರಾ, ಸುರೇಶ್ ನಾಯ್ಕೋ, ಪ್ರಭಾ ಶೆಟ್ಟಿ, ಜಯಶ್ರೀ, ಭಾನು ಭಾಸ್ಕರ್, ದಿನೇಶ್ ಕೋಟ್ಯಾನ್, ರೋಶನ್ ಬೆರೆಟ್ಟೋ, ಸತೀಶ್ ಜಪಿತಿ, ವಾಣಿ ಆರ್. ಶೆಟ್ಟಿ, ಸೂರಿ ಸಾಲ್ಯಾನ್, ಸುರೇಶ್ ಮೆಂಡನ್, ಲಕ್ಷ್ಮೀ ನಾರಾಯಣ ಪ್ರಭು ಉಪಸ್ಥಿತರಿದ್ದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಜಿಲ್ಲಾ ಸಂಯೋಜಕಿ ರೋಶನಿ ಒಲಿವೇರಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಪಂ ಸದಸ್ಯೆ ಡಾ.ಸುನೀತಾ ಶೆಟ್ಟಿ ಹಾಗೂ ಅಮೃತಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News