×
Ad

ಉಡುಪಿ: ಲಸಿಕೆ ನೀಡಿಕೆಯಲ್ಲಿ ಶೇ.56.11 ಗುರಿ ಸಾಧನೆ

Update: 2021-01-30 20:58 IST

ಉಡುಪಿ, ಜ.30: ಶನಿವಾರ ಜಿಲ್ಲೆಯಲ್ಲಿ ವೈದ್ಯರೂ ಸೇರಿದಂತೆ 11 ಕೇಂದ್ರಗಳಲ್ಲಿ ನಿಗದಿತ 1100 ಆರೋಗ್ಯ ಕಾರ್ಯಕರ್ತರಲ್ಲಿ 577 ಮಂದಿ ಕೊರೋನಾ ವಿರುದ್ಧದ ‘ಕೊವಿಶೀಲ್ಡ್’ ಲಸಿಕೆ ಪಡೆದಿದ್ದು, ಇದು ದಿನದ ನಿಗದಿತ ಗುರಿಯ ಶೇ.52ರಷ್ಟಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಕೋವಿಡ್ ವಿರುದ್ಧದ ವ್ಯಾಕ್ಸಿನೇಷನ್‌ನ ಮೊದಲ ಹಂತದಲ್ಲಿ 22,103 ಮಂದಿ ಕೊರೋನಾ ವಾರಿಯರ್ಸ್‌ಗೆ ಲಸಿಕೆ ನೀಡುವ ಗುರಿ ಇದ್ದು, ಈವರೆಗೆ 12,403 ಮಂದಿ ಲಸಿಕೆಯನ್ನು ಸ್ವೀಕರಿಸಿದ್ದಾರೆ. ಈ ಮೂಲಕ ಶೇ.56.11ರಷ್ಟು ಗುರಿ ಸಾಧನೆ ಮಾಡಲಾಗಿದೆ ಎಂದವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News